ಶೌಚಾಲಯದಲ್ಲಿ ನವಜಾತ ಶಿಶುವಿನ ಶವವೊಂದು ಪತ್ತೆಯಾಗಿರುವ ಹೃದಯ ವಿದ್ರಾವಕ ಘಟನೆ ಕೊಪ್ಪಳ ನಗರದ ಜಿಲ್ಲಾಸ್ಪತ್ರೆಯ ರ್ಯಾಪಿಡ್ ವಾರ್ಡ್ ನಲ್ಲಿ ಕಂಡು ಬಂದಿದೆ.
ನವಜಾತ ಶಿಶುವಿನ ರುಂಡ-ಮುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದ ವಾರ್ಡ್ ಇದಾಗಿದ್ದು, ಸಮೀಪದಲ್ಲಿ ಹೆರಿಗೆ ವಿಭಾಗ ಇಲ್ಲವಾಗಿದೆ. ನೌಕರರೊಬ್ಬರು ಶೌಚಾಲಯ ಸ್ವಚ್ಛಗೊಳಿಸಲು ನೀರು ಹಾಕಿದಾಗ ಈ ನವಜಾತ ಶಿಶು ಪತ್ತೆಯಾಗಿದೆ. ಗೊಂಬೆ ಇರಬಹುದೆಂದು ಅದನ್ನು ತೆಗೆಯಲು ಹೋದಾಗ ತಲೆ ಮಾತ್ರ ಹೊರ ಬಂದಿದೆ. ನಂತರ ಕೈ ಕಾಲು, ಮುಂಡ ಪ್ರತ್ಯೇಕವಾಗಿರುವುದು ಕಂಡು ಬಂದಿದೆ. ಕಿಮ್ಸ್ ವೈದ್ಯಕೀಯ ಅಧೀಕ್ಷಕರು ಕೊಪ್ಪಳ ನಗರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.







