ಕಲಬುರಗಿ: ಅಕ್ಕಲಕೋಟದ ಸ್ವಾಮಿ ಸಮರ್ಥರ ದರ್ಶನ ಮಾಡಿ ಮರಳಿ ಊರಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಭೀಕರ ಅಪಘಾತ ಸಂಭವಿಸಿದ ಪರಿಣಾಮ 6 ಜನ ಸಾವನ್ನಪ್ಪಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಈ ಘಟನೆಯ ಅಕ್ಕಲಕೋಟ ತಾಲೂಕಿನ ಶಿರವಾಳ ವಾಡಿ ಹತ್ತಿರ ಮಜಘ್ಗ, ಸಿಮೆಂಟ್ ಟ್ಯಾಂಕರ್ ಹಾಗೂ ಕ್ರೂಸರ್ ಮಧ್ಯೆ ಭೀಕರ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ (Accident) ಐವರು ಮಹಿಳೆಯರು ಹಾಗೂ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಅಲ್ಲದೇ, 10 ಜನರ ಸ್ಥಿತಿ ಗಂಭೀರವಾಗಿದೆ. ಅಪಘಾತದಲ್ಲಿ ಲಲಿತಾಬಾಯಿ ಮಹಾದೇವ ಬುಗ್ಗೆ (50), ರೋಹಿಣಿ ಗೋಪಾಲ ಪೂಜಾರಿ (40), ಸುಂದರಾಬಾಯಿ ಭರತಸಿಂಗ್ ರಜಪೂತ (55), ಸಾಹಿನಾಥ್ ಗೋವಿಂದ ಪೂಜಾರಿ (10) ಸಂಗೀತ ಮದನ್ ಗಾನೆ (35) ಛಾಯಾ ಹನುಮಾನ ನವರೆ (46) ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಸೊಲ್ಲಾಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ. ವಾಹನದಲ್ಲಿದ್ದವರೆಲ್ಲರೂ ಆಳಂದ ತಾಲೂಕಿನ ಅಣ್ಮೂರು ಗ್ರಾಮದ ನಿವಾಸಿಗಳು ಎನ್ನಲಾಗಿದೆ. ಸ್ಥಳಕ್ಕೆ ಅಕ್ಕಲಕೋಟ ಪೊಲೀಸರು ಹಾಗೂ ಸೊಲ್ಲಾಪುರ ಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.








