ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪಟ್ಟಣದ ಸ್ಮಶಾನದ ಹತ್ತಿರ ಇದ್ದ ಮರಕ್ಕೆ ಮರಕ್ಕೆ ನೇಣು ಬಿಗಿದ (Suicide Case) ಸ್ಥಿತಿಯಲ್ಲಿ ಮೃತದೇಹವೊಂದು ಪತ್ತೆಯಾಗಿದ್ದು, ಅದು ಕೊಳೆತ ಸ್ಥಿತಿಯಲ್ಲಿ ಇದೆ ಎನ್ನಲಾಗಿದೆ.
ಹೀಗಾಗಿ ಈ ಕೊಳೆತ ಶವ ಮರದಲ್ಲಿ ನೇತಾಡುತ್ತಿದ್ದನ್ನು ಕಂಡು ಸ್ಥಳೀಯರು ಭಯಭೀತರಾಗಿದ್ದು, ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಪೊಲೀಸ್ ಠಾಣೆಯಿಂದ ಈ ವ್ಯಕ್ತಿ ನಾಪತ್ತೆಯಾಗಿದ್ದ ಎಂದು ತಿಳಿದು ಬಂದಿದೆ.
ಈ ಶವವು ಲಾರಿ ಚಾಲಕ ಬಸಂವತ ಕುಮಾರ್(37) ಎಂದು ಗುರುತಿಸಲಾಗಿದೆ. ದಾವಣಗೆರೆ ಜಿಲ್ಲೆಯ ಜಗಳೂರು ತಾ. ಕಟ್ಟಿಗೆಹಳ್ಳಿ ನಿವಾಸಿಯಾಗಿರುವ ಚಾಲಕ ಬಸವಂತ ಕುಮಾರ್, ಕಳೆದ ಜನ್ 5ರಂದು ಸಂಚಾರಿ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಪೊಲೀಸರು ಲಾರಿಯನ್ನು ವಶಕ್ಕೆಪಡೆದಿದ್ದರು. ಆದರೆ, ದಂಡ ಕಟ್ಟಲು ಹಣ ಇಲ್ಲದ ಕಾರಣ ಚಾಲಕ ಬಸವಂತ ನಾಪತ್ತೆಯಾಗಿದ್ದರು. ಜೂನ್ 30ರ ಸಂಜೆ ಬಸವಂತ ಕುಮಾರ್ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದೆ. ಹೊಳಲ್ಕೆರೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.








