ಬೆಂಗಳೂರು: ಇತ್ತೀಚೆಗೆ ಯುವ ಪೀಳಿಗೆಯಲ್ಲಿ ಅಪರಾಧ ಮನೋಭಾವ ಹೆಚ್ಚಾಗುತ್ತಿದೆ. ಇತ್ತೀಚೆಗೆ ಬೆಳಕಿಗೆ ಬರುತ್ತಿರುವ ಕೊಲೆ, ಸುಲಿಗೆಗಳೇ ಇದಕ್ಕೆ ಕಾರಣ.
ನಗರದಲ್ಲಿ ಚಾಕುವಿನಿಂದ ಇರಿದು (stabbed) ಪಿಯು ವಿದ್ಯಾರ್ಥಿಯ ಕೊಲೆ ಮಾಡಿರುವ ಘಟನೆ ಮಂಜುನಾಥ್ ನಗರದ ಗೌತಮ್ ಕಾಲೇಜು ಬಳಿ ಬೆಳಕಿಗೆ ಬಂದಿದೆ.
ಘಟನೆಯಲ್ಲಿ ಸುಹೇಲ್(18) ಕೊಲೆಯಾಗಿರುವ ವಿದ್ಯಾರ್ಥಿ ಎಂದು ಗುರುತಿಸಲಾಗಿದ್ದು, ಈ ಯುವಕ ಪ್ರಥಮ ಪಿಯುಸಿಯಲ್ಲಿ ಓದುತ್ತಿದ್ದ ಎನ್ನಲಾಗಿದೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಬಸವೇಶ್ವರನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ತನಿಖೆ ಕೈಗೊಂಡಿದ್ದಾರೆ.








