ಬ್ಯಾಟರಿ ಸರಿಯಾಗಿ ಕೆಲಸ ಮಾಡುವುದಿಲ್ಲ ಅಥವಾ ಬ್ಯಾಟರಿಯಲ್ಲಿ ಚಾರ್ಜ್ ಇಲ್ಲ ಎಂದಾದರೆ ಇತ್ತೀಚಿನ ದಿನಗಳಲ್ಲಿ ಬ್ಯಾಟರಿ ಚಾರ್ಜ್ ಮಾಡಲು ಪವರ್ ಬ್ಯಾಂಕ್ (Power Bank) ಬಳಸುತ್ತಿದ್ದಾರೆ.
ಇದರ ಬಳಕೆಯಿಂದಾಗಿ ಬ್ಯಾಟರಿಗೆ ಹಾನಿಯಾಗುತ್ತದೆಯೇ? ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. ಪವರ್ ಬ್ಯಾಂಕ್ ಮೂಲಕ ಸ್ಮಾರ್ಟ್ಫೋನ್ ಬ್ಯಾಟರಿಯನ್ನು ಚಾರ್ಜ್ ಮಾಡುವುದು ಸಂಪೂರ್ಣ ಸುರಕ್ಷಿತ. ಯಾವುದೇ ತೊಂದರೆ ಇಲ್ಲ. ಫೋನ್ ಮತ್ತು ಬ್ಯಾಟರಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ, ಗುಣಮಟ್ಟದ ಪವರ್ ಬ್ಯಾಂಕ್ ಅನ್ನು ಬಳಸಬೇಕು ಮತ್ತು ಅದರ ವಿದ್ಯುತ್ ಉತ್ಪಾದನೆಯು ಮೊಬೈಲ್ ಚಾರ್ಜರ್‌ಗೆ ಸಮಾನವಾಗಿರಬೇಕು ಎದು ಸಂಶೋಧನೆ ಹೇಳುತ್ತಿದೆ.
ಕಡಿಮೆ ಬೆಲೆಗೆ ಪವರ್ ಬ್ಯಾಂಕ್ ಖರೀದಿಸಿ ಮೊಬೈಲ್ ಚಾರ್ಜ್ ಮಾಡುತ್ತಾರೆ. ಆದರೆ, ಅಗ್ಗದ ಪವರ್ ಬ್ಯಾಂಕ್‌ಗಳು ಸ್ಮಾರ್ಟ್‌ಫೋನ್ ಬ್ಯಾಟರಿಯನ್ನು ಹಾನಿಗೊಳಿಸಬಹುದು. ಓವರ್ ಚಾರ್ಜ್ ಮಾಡಿದರೆ, ಅವು ಹೆಚ್ಚು ವಿದ್ಯುತ್ ಉತ್ಪಾದನೆಯನ್ನು ಬಿಡುಗಡೆ ಮಾಡುತ್ತವೆ. ಇದರಿಂದ ಮೊಬೈಲ್‌ಗೆ ಹಾನಿ ಆಗುತ್ತದೆ. ದುಬಾರಿ ಅಥವಾ ಉತ್ತಮವಾದ ಪವರ್ ಬ್ಯಾಂಕ್‌ಗಳು ಕಟ್ಆಫ್ ತಂತ್ರಜ್ಞಾನದೊಂದಿಗೆ ಬರುತ್ತವೆ. ಅದು ಸಂಪೂರ್ಣವಾಗಿ ಚಾರ್ಜ್ ಆದ ತಕ್ಷಣ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸುತ್ತದೆ. ಇದು ಬಹಳ ಉಪಯುಕ್ತ ಎನ್ನಲಾಗುತ್ತಿದೆ.








