ಭೋಪಾಲ್: ಸದ್ಯ ದೇಶದಲ್ಲಿ ಟೊಮೆಟೋಗೆ ಚಿನ್ನದ ಬೆಲೆ ಬಂದಿದ್ದು, ಸದ್ಯ ಒಂದು ಕುಟುಂಬವನ್ನೇ ದೂರ ಮಾಡಿದೆ.
ಪತ್ನಿಯನ್ನು ಕೇಳದೆ ಪತಿಯೊಬ್ಬ ಅಡುಗೆ ಮನೆಯಲ್ಲಿ ಟೊಮೆಟೋ ಬಳಸಿದ್ದಕ್ಕೆ ಪತ್ನಿ ಮಗುವಿನೊಂದಿಗೆ ಮನೆ ಬಿಟ್ಟು ಹೋಗಿರುವ ಘಟನೆ ಮಧ್ಯಪ್ರದೇಶದ (Madhya Pradesh) ಶಹದೋಲ್ನಲ್ಲಿ (Shahdol) ನಡೆದಿದೆ.
ಸಂಜೀವ್ ಬರ್ಮನ್ ಎಂಬ ವ್ಯಕ್ತಿ ಟಿಫಿನ್ ಸರ್ವಿಸ್ ನಡೆಸುತ್ತಿದ್ದರು. ಅಡುಗೆ (Cook) ಮಾಡುವ ಸಂದರ್ಭದಲ್ಲಿ ಪತ್ನಿಯ ಅನುಮತಿ ಇಲ್ಲದೆ 2 ಟೊಮೆಟೋವನ್ನು ಅಡುಗೆಯಲ್ಲಿ ಬಳಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಕೋಪಗೊಂಡ ಪತ್ನಿ, ಜಗಳವಾಡಿ ಮಗಳನ್ನು ಕರೆದುಕೊಂಡು ಮನೆಬಿಟ್ಟು ಹೋಗಿದ್ದಾಳೆ.
ನಂತರ ಸಂಜೀವ್ ತನ್ನ ಹೆಂಡತಿ ಮತ್ತು ಮಗಳನ್ನು ಹುಡುಕಲು ಹೋಗಿದ್ದಾರೆ. ಆದರೆ ಎಲ್ಲಿಯೂ ಪತ್ತೆಯಾಗದ ಹಿನ್ನೆಲೆ ಸಂಜೀವ್ ಹತ್ತಿರದ ಪೊಲೀಸ್ ಠಾಣೆಯಲ್ಲಿ ಹೆಂಡತಿ ಮನೆ ಬಿಟ್ಟು ಹೋಗಿರುವ ಬಗ್ಗೆ ದೂರು ನೀಡಿದ್ದಾರೆ. ಅಲ್ಲದೇ ಹುಡುಕಿಕೊಡುವಂತೆ ಪೊಲೀಸರ ಬಳಿ ಮನವಿ ಮಾಡಿದ್ದಾರೆ. 2 ಟೊಮೆಟೊ ತೆಗೆದುಕೊಂಡು ಅಡುಗೆಯಲ್ಲಿ ಬಳಸಿದೆ. ಪತ್ನಿ ಜೊತೆ ಮಾತನಾಡದೆ 3 ದಿನಗಳಾಗಿದ್ದು, ಅವರು ಎಲ್ಲಿದ್ದಾರೆ ಎಂಬ ಬಗ್ಗೆಯೂ ತಿಳಿದಿಲ್ಲ ಎಂದು ಸಂಜೀವ್ ಬೇಸರ ವ್ಯಕ್ತಪಡಿಸಿದ್ದಾರೆ.