ನವದೆಹಲಿ : ದೇಶದ ಶ್ರೀಮಂತ ಶಾಸಕರ (Richest MLAs) ಸಾಲಿನಲ್ಲಿ ರಾಜ್ಯದ ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar) ಮೊದಲ ಸ್ಥಾನದಲ್ಲಿದ್ದಾರೆ.
ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ಸಂಸ್ಥೆ ಬಿಡುಗಡೆ ಮಾಡಿರುವ ವರದಿಯಲ್ಲಿ ಈ ಪಟ್ಟಿ ಬಹಿರಂಗವಾಗಿದೆ. ಇತ್ತೀಚೆಗೆ ನಡೆದಿದ್ದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕನಕಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಡಿ.ಕೆ. ಶಿವಕುಮಾರ್ ಗೆಲುವು ಸಾಧಿಸಿದ್ದರು. ಅವರ ಒಟ್ಟು ಆಸ್ತಿ 1,413 ಕೋಟಿ ರೂ. ಎಂದು ವರದಿ ಹೇಳಿದೆ.
ಈ ಪಟ್ಟಿ ನೋಡುವುದಾದರೆ ಡಿ.ಕೆ. ಶಿವಕುಮಾರ್ (1,413 ಕೋಟಿ ರೂ. ಆಸ್ತಿ – ಕರ್ನಾಟಕದ ಕನಕಪುರ ಕ್ಷೇತ್ರ), ಕೆ.ಹೆಚ್.ಪುಟ್ಟಸ್ವಾಮಿ ಗೌಡ (1,267 ಕೋಟಿ ರೂ. – ಕರ್ನಾಟಕದ ಗೌರಿಬಿದನೂರ್ ಕ್ಷೇತ್ರ), ಪ್ರಿಯಕೃಷ್ಣ (1,156 ಕೋಟಿ ರೂ. – ಕರ್ನಾಟಕದ ಗೋವಿಂದರಾಜನಗರ ಕ್ಷೇತ್ರ), ಎನ್.ಚಂದ್ರಬಾಬು ನಾಯ್ಡು (688 ಕೋಟಿ ರೂ. – ಆಂಧ್ರಪ್ರದೇಶದ ಕುಪ್ಪಂ ಕ್ಷೇತ್ರ), ಜಯಂತಿಭಾಯ್ ಸೋಮಭಾಯ್ ಪಟೇಲ್ (661 ಕೋಟಿ ರೂ. – ಗುಜರಾತ್ನ ಮನ್ಸಾ ಕ್ಷೇತ್ರ), ಬಿ.ಎಸ್.ಸುರೇಶ (648 ಕೋಟಿ ರೂ. – ಕರ್ನಾಟಕದ ಹೆಬ್ಬಾಳ್). ವೈ.ಎಸ್. ಜಗನ್ ಮೋಹನ್ ರೆಡ್ಡಿ (510 ಕೋಟಿ ರೂ. – ಆಂಧ್ರಪ್ರದೇಶದ ಪುಲಿವೆಂದ್ಲ ಕ್ಷೇತ್ರ), ಪರಾಗ್ ಶಾ (500 ಕೋಟಿ ರೂ. – ಮಹಾರಾಷ್ಟ್ರದ ಘಟ್ಕೋಪರ್ ಪೂರ್ವ ಕ್ಷೇತ್ರ), ಟಿ.ಎಸ್. ಬಾಬು (500 ಕೋಟಿ ರೂ. – ಛತ್ತೀಸಗಢದ ಅಂಬಿಕಾಪುರ್ ಕ್ಷೇತ್ರ), ಮಂಗಳ್ಪ್ರಭಾತ್ ಲೋಧಾ (441 ಕೋಟಿ ರೂ. – ಮಹಾರಾಷ್ಟ್ರದ ಮಲಬಾರ್ ಹಿಲ್ ಕ್ಷೇತ್ರ. ಈ ಪಟ್ಟಿಯಲ್ಲಿ ಸ್ಥಾನ ಪಡೆದವರಾಗಿದ್ದಾರೆ.