ಸರ್ಕಾರದ ಮಹತ್ವಾಕಾಂಕ್ಷಿ ಗೃಹ ಜ್ಯೋತಿ ಗ್ಯಾರಂಟಿಯ ಶೇ. 60ರಷ್ಟು ಗ್ರಾಹಕರು ನೊಂದಣಿ ಮಾಡಿಕೊಂಡಿದ್ದಾರೆ.
ವಿದ್ಯುತ್ ಸರಬರಾಜು ಕಂಪನಿಯ ಮಾಹಿತಿಯಂತೆ, 1.92 ಕೋಟಿ ಗೃಹ ಬಳಕೆದಾರರಲ್ಲಿದ್ದು, ಇದರಲ್ಲಿ ಶೇ. 90ಕ್ಕೂ ಅಧಿಕ ಜನರು ಮಾಸಿಕ ಸರಾಸರಿ 200 ಯೂನಿಟ್ ಗಿಂದ ಕಡಿಮೆ ವಿದ್ಯುತ್ ಬಳಕೆ ಮಾಡುವವರಿದ್ದಾರೆ. ಈ ಪೈಕಿ ಇಲ್ಲಿಯವರೆಗೆ ಅಂದಾಜು 1.18 ರಿಂದ 1.20 ಕೋಟಿ ಜನ ಸೇವಾಸಿಂಧು ಪೋರ್ಟಲ್ ಮೂಲಕ ನೋಂದಣಿ ಮಾಡಿಕೊಂಡಿದ್ದಾರೆ. ಇನ್ನುಳಿದವರು ನೋಂದಣಿ ಮಾಡಿಕೊಂಡಿಲ್ಲ.
ಮೊದಲ ತಿಂಗಳ ಫಲಾನುಭವಿ ಆಗಲು ಜು. 25 ಕೊನೆಯ ದಿನವಾಗಿದೆ. ನೋಂದಣಿ ಮಾಡಿಸಿಕೊಳ್ಳದವರು ಯೋಜನೆಯಡಿ ಫಲಾನುಭವಿಗಳಾಗಲು ಒಂದು ತಿಂಗಳು ಕಾಯುವುದು ಅನಿವಾರ್ಯವಾಗಿದ್ದು, ಸೆಪ್ಟೆಂಬರ್ ನಲ್ಲಿ ಇದರ ಲಾಭ ಪಡೆಯಲು ಅವಕಾಶ ಇದೆ. ಅರ್ಜಿ ಸಲ್ಲಿಕೆಗೆ ಸರ್ಕಾರ ಯಾವುದೇ ದಿನಾಂಕ ನಿಗದಿ ಮಾಡಿಲ್ಲ.