ರಾಯಚೂರು : ಅದೆಷ್ಟೋ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿ ನಿಂತಿರುವ, ಮಕ್ಕಳ ಜೀವನದ ಮಾರ್ಗಕ್ಕೆ ಬೆಳಕಾಗಿರುವ ಉಪನ್ಯಾಸಕ . ಕಳೆದ ಆರು ವರ್ಷಗಳಿಂದ ರಾಯಚೂರು ಜಿಲ್ಲೆಯ ಲಿಂಗಸುಗೂರ ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತಿಹಾಸ ವಿಷಯದಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆಸಲ್ಲಿಸುತ್ತಿರುವ ಡಾ.ಅಮರೇಶ್ ಮೂರು ವರ್ಷಗಳಿಂದ ಎರಡು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾರೆ. ಬಡತನದ ಬರೆಯಿಂದಾಗಿ ಕೈ ಹಿಡಿದ ಮಡದಿಯನ್ನು ಸಹ ಕಳೆದುಕೊಂಡಿದ್ದಾರೆ.
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಆಲ್ಕೋಡ್ ಗ್ರಾಮದ ಡಾ.ಅಮರೇಶ್ ಕಳೆದ ಮೂರು ವರ್ಷಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ವಾರಕ್ಕೆ ಎರಡು ಸಾರಿ ಡಯಾಲಿಸಸ್ ಮಾಡಿಸಿಕೊಳ್ಳುಬೇಕಾಗಿದೆ. ಡಯಾಲಿಸಸ್ ಮತ್ತು ಕಿಡ್ನಿಗಳ ಚಿಕಿತ್ಸೆಯ ಸಲುವಾಗಿ ಇದುವರೆಗೂ ಸುಮಾರು 15-20 ಲಕ್ಷ ರೂ.ಗಳನ್ನು ಈಗಾಗಲೇ ಸಾಲಸೂಲ ಮಾಡಿ ಖರ್ಚು ಮಾಡಿಕೊಂಡಿದ್ದಾರೆ. ಅಲ್ಲದೇ ಕಳೆದ ತಿಂಗಳಷ್ಟೇ ಹೃದಯಾಘಾತದಿಂದ ಇವರ ಪತ್ನಿ ಕೂಡ ಮೃತಪಟ್ಟಿದ್ದಾರೆ. ಮನೆಯಲ್ಲಿ ಉಂಟಾದ ಆರ್ಥಿಕ ಪರಿಸ್ಥಿತಿಯಿಂದಾಗಿ ಹೆಂಡತಿಗೆ ಚಿಕಿತ್ಸೆ ಕೊಡಿಸಲಾಗದೆ ಡಾ.ಅಮರೇಶ್ ಹೆಂಡತಿಯನ್ನು ಸಹ ಕಳೆದುಕೊಂಡಿದ್ದಾರೆ.
ಇನ್ನೂ ತನ್ನ ಮಕ್ಕಳ ಪಾಲನೆಗಾಗಿ ಮತ್ತು ತನ್ನ ಮುಂದಿನ ಜೀವನಕ್ಕಾಗಿ ಸರ್ಕಾರಕ್ಕೆ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ. 
ಇವರ ಆರೋಗ್ಯ ದೃಷ್ಟಿಯಿಂದ ಹಾಗೂ ಇವರ ಮಕ್ಕಳ ಭವಿಷ್ಯದ ಸಲುವಾಗಿ ಆದರೂ ಸರ್ಕಾರ ಇವರ ನೆರವಿಗೆ ಮುಂದಾಗಲಿ. ಇವರಿಗೆ ಸರ್ಕಾರದ ವತಿಯಿಂದ ಒಳ್ಳೆಯ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ದೊರೆಯಲಿ ಎಂಬುದು ನಮ್ಮೆಲ್ಲರ ಆಶಯವಾಗಿದೆ.
ಡಾ.ಅಮರೇಶ್ ಆಲ್ಕೋಡ್ ರವರ ನೋವಿಗೆ ಸ್ಪಂದಿಸುವ ಮನಸ್ಸುಗಳು, ಇವರ ಕುಟುಂಬಕ್ಕೆ ನೆರವಾಗುವ ಹೃದಯವಂತರು ಇವರ ದೂರವಾಣಿ ಸಂಖ್ಯೆ: 6364056438 & 8105559685 ಗೆ ಕರೆಮಾಡಿ ಧೈರ್ಯ ಹೇಳಿ,
ಬ್ಯಾಂಕ್ ಖಾತೆಯ ವಿವರ: ಡಾ. ಅಮರೇಶ್ ಆಲ್ಕೋಡ್, ಎಸ್.ಬಿ.ಐ ಬ್ಯಾಂಕ್, ಸಿರವಾರ ಶಾಖೆ, ಖಾತೆ ಸಂಖ್ಯೆ 31090846274 ಐ.ಎಫ್.ಎಸ್.ಸಿ ಕೋಡ್:SBIN0011137 ಮೂಲಕ ಕೈಲಾದ ಸಹಾಯ ಮಾಡಬಹುದಾಗಿದೆ.








