ಪೈರಸಿ ಮಾಡುವವರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ಹಾಗೂ ಸಿನಿಮಾದ ಬಜೆಟ್ ನ ಶೇ.5ರಷ್ಟು ಮೊತ್ತವನ್ನು ದಂಡ ವಸೂಲಿ ಮಾಡುವ ವಿಧೇಯಕ ಪ್ರತಿಪಕ್ಷಗಳ ಸಭಾತ್ಯಾಗದ ನಡುವೆ ರಾಜ್ಯಸಭೆಯಲ್ಲಿ ಅಂಗೀಕಾರವಾಗಿದೆ.
ಸಿನಿಮಾಟೋಗ್ರಾಫ್ (ತಿದ್ದುಪಡಿ) ಮಸೂದೆ-2023’ ಪಾಸ್ ಆಗಿದೆ. ಅನಧಿಕೃತವಾಗಿ ಸಿನಿಮಾಗಳನ್ನು ರೆಕಾರ್ಡ್ ಮಾಡಿಕೊಳ್ಳುವುದು ಹಾಗೂ ಪ್ರದರ್ಶಿಸುವುದನ್ನು ನಿರ್ಬಂಧಿಸಲು ಸಿನಿಮಾಟೋಗ್ರಾಫ್ ಕಾಯ್ದೆಗೆ 6ಎಎ ಹಾಗೂ ಸೆಕ್ಷನ್ 6ಎಬಿ ಸೇರ್ಪಡೆ ಮಾಡಲು ಕೂಡ ಈ ವಿಧೇಯಕ ಅವಕಾಶ ಕಲ್ಪಿಸುತ್ತದೆ.
ಪೈರಸಿಯಿಂದ ಅನುಭವಿಸುತ್ತಿರುವ 20 ಸಾವಿರ ಕೋಟಿ ರು. ನಷ್ಟಕ್ಕೆ ಇನ್ನು ತೆರೆ ಬೀಳಲಿದೆ ಎಂದು ವಿಧೇಯಕದ ಮೇಲಿನ ಚರ್ಚೆ ವೇಳೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ.