90 ದೇಶದ ಜೈಲಲ್ಲಿ 8330 ಭಾರತೀಯ ಕೈದಿಗಳು ವಾಸ
8330 Indian prisoners live in 90 country jails
ಜಗತ್ತಿನ 90 ದೇಶಗಳ ಜೈಲುಗಳಲ್ಲಿ ಒಟ್ಟು 8,333 ಭಾರತೀಯ ಕೈದಿಗಳಿದ್ದಾರೆ ಎಂದು ಸರ್ಕಾರದ ಅಂಕಿ-ಅಂಶಗಳು ತಿಳಿಸಿವೆ. 90 ದೇಶಗಳಲ್ಲಿರುವ 8330 ಭಾರತೀಯ ಕೈದಿಗಳ ಪೈಕಿ ಯುಎಇನಲ್ಲಿ 1611, ಸೌದಿಯಲ್ಲಿ 1461, ನೇಪಾಳದಲ್ಲಿ 1222, ಕತಾರ್‌ನಲ್ಲಿ 696, ಕುವೈತ್‌ನಲ್ಲಿ 446, ಪಾಕಿಸ್ತಾನದಲ್ಲಿ 308, ಬದ್ರೇನ್‌ನಲ್ಲಿ 277, ಒಮಾನ್‌ನಲ್ಲಿ 139, ಚೀನಾದಲ್ಲಿ 178, ಬಾಂಗ್ಲಾದಲ್ಲಿ 60, ಭೂತಾನ್‌ನಲ್ಲಿ 57, ಲಂಕಾದಲ್ಲಿ 20, ಮ್ಯಾನ್ಮಾರ್‌ನಲ್ಲಿ 26 ಭಾರತೀಯ ಕೈದಿಗಳಿದ್ದಾರೆ.
ಸರ್ಕಾರದ ನಿರಂತರ ಪ್ರಯತ್ನದಿಂದಾಗಿ 2014ರಿಂದ ಈವರೆಗೆ 4597 ಭಾರತೀಯ ಕೈದಿಗಳು ಕ್ಷಮಾದಾನ ಮತ್ತು ಶಿಕ್ಷೆಯ ಕಡಿತವನ್ನು ಪಡೆದಿದ್ದಾರೆ.








