ಅಮೆರಿಕ ಅಧ್ಯಕ್ಷೀಯ ಹುದ್ದೆ ರೇಸ್ ನಲ್ಲಿ ಮೂವರು ಭಾರತೀಯರು…
Three Indians in the US presidential race…
2024ರ ಬೇಸಿಗೆಯಲ್ಲಿ ದೇಶದಲ್ಲಿ ಲೋಕಸಭಾ ಸಾರ್ವತ್ರಿಕ ಚುನಾವಣೆ ರಂಗೇರಿರುತ್ತದೆ. ಭಾವಿ ಸಂಸದ ಹಣೆಬರಹ ನಿರ್ಧಾರವಾಗಲಿದೆ. ಈ ಬಾರಿಯ ಚುನಾವಣೆ ಸಾಕಷ್ಟು ಕುತೂಹಲ ಮೂಡಿದ್ದು, ಆಡಳಿತಾರೂಢ ಬಿಜೆಪಿಯನ್ನು ಅಧಿಕಾದಿಂದ ದೂರವಿಡಲು ಪ್ರತಿಪಕ್ಷಗಳು ತುದಿಗಾಲಿನಲ್ಲಿವೆ. ಅದೇರೀತಿ ಮೂರನೇ ಬಾರಿಗೆ ಅಧಿಕಾರದ ಗದ್ದುಗೆ ಏರಲು ಬಿಜೆಪಿ ಸಿದ್ಧತೆ ನಡೆಸಿದೆ.
ಹಾಗೇಯೇ 2024ರಲ್ಲಿ ಭಾರತದಲ್ಲಿ ಮಾತ್ರವಲ್ಲದೆ ಅಮೆರಿಕದಲ್ಲೂ ಚುನಾವಣೆ ನಡೆಯಲಿದೆ. ಹೌದು ಅಮೆರಿಕ ಅಧ್ಯಕ್ಷೀಯ ಚುನಾವಣೆ 2024ರಲ್ಲೇ ಇದೆ.
ಈ ಅಧ್ಯಕ್ಷರ ಆಯ್ಕೆ ರೇಸ್ ನಲ್ಲಿ ಮೂವರು ಭಾರತೀಯರೂ ಇದ್ದಾರೆ. ರಿಪಬ್ಲಿಕನ್ ಪಕ್ಷದಿಂದ ಈಗಾಗಲೇ ಮಾಜಿ ಅಧ್ಯಕ್ಷ ಟ್ರಂಪ್ ತಮ್ಮ ಉಮೇದುವಾರಿಕೆ ಘೋಷಿಸಿದ್ದಾರೆ. ಇವರ ಜೊತೆಗೆ ಭಾರತೀಯ ಮೂಲದ ನಿಕ್ಕಿ ಹ್ಯಾಲೆ, ವಿವೇಕ್ ರಾಮಸ್ವಾಮಿ ಮತ್ತು ಹರ್ಷ ವರ್ಧನ್ ಸಿಂಗ್ ಕಣಕ್ಕೆ ಇಳಿದಿದ್ದಾರೆ.
ರಿಪಬ್ಲಿಕನ್ ಪಕ್ಷದ ನಿಕ್ಕಿ ಹ್ಯಾಲೆ, ರಿಪಬ್ಲಿಕನ್ ಪಕ್ಷದ ವಿವೇಕ್ ರಾಮಸ್ವಾಮಿ ಮತ್ತು ಇದೇ ಪಕ್ಷದ ಹರ್ಷ ವರ್ಧನ್ ಸಿಂಗ್ ಅವರು ಕೂಡ ನಾಮಪತ್ರ ಸಲ್ಲಿಸಿದ್ದಾರೆ.
ಈ ಮೂವರು ಭಾರತೀಯರ ಗೆಲುವು-ಸೋಲು 2024ರ ಜುಲೈನಲ್ಲಿ ನಡೆವ ಅಂತರಿಕ ಚುನಾವಣೆ ಯಲ್ಲಿ ನಿರ್ಧಾರವಾಗಲಿದೆ.