ಕಲಬುರಗಿ: ಕೊರೊನಾ ಪ್ರಾಥಮಿಕ ಸಂಪರ್ಕ ಹೊಂದಿದ್ದ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಆರೋಗ್ಯ ಸಹಾಯಕರ ಮೇಲೆ ಹಲ್ಲೆ ಮಾಡಿರುವ ಘಟನೆ ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಕೋಲಕುಂದಾ ದೊಡ್ಡ ತಾಂಡಾದಲ್ಲಿ ನಡೆದಿದೆ.
ದೊಡ್ಡ ತಾಂಡಾದ 17 ವರ್ಷದ ಬಾಲಕಿಗೆ ಕೊರೊನಾ ಪ್ರಾಥಮಿಕ ಸಂಪರ್ಕ ಹೊಂದಿದ್ದಳು. ಬಾಲಕಿಯನ್ನು ಕರೆದೊಯ್ಯಲು ಆರೋಗ್ಯ ಇಲಾಖೆ ಸಿಬ್ಬಂದಿ, ಪೊಲೀಸರ ಸಹಾಯದೊಂದಿಗೆ ತಾಂಡಾಕ್ಕೆ ತೆರಳಿದ್ದರು.
ಸೋಂಕಿತ ಬಾಲಕಿಯನ್ನು ಆಂಬುಲೆನ್ಸ್‍ನಲ್ಲಿ ಹತ್ತಿಸಿಕೊಳ್ಳಲು ಮುಂದಾದಾಗ ಗ್ರಾಮಸ್ಥರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಗ್ರಾಮದ ವ್ಯಕ್ತಿಯೋರ್ವನ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಇದರಿಂದ ರೊಚ್ಚಿಗೆದ್ದ ನೂರಾರು ಜನ ಕಲ್ಲು, ದೊಣ್ಣೆಗಳಿಂದ ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಈ ಘರ್ಷಣೆಯಲ್ಲಿ ಇಬ್ಬರು ಪೊಲೀಸರು ಮತ್ತು ಓರ್ವ ಆರೋಗ್ಯ ಸಿಬ್ಬಂದಿಗೆ ಗಾಯಗಳಾಗಿದ್ದು, ಆಂಬುಲೆನ್ಸ್‍ನ ಗಾಜು ಪುಡಿ-ಪುಡಿಯಾಗಿವೆ.
ಘಟನೆಯಲ್ಲಿ ಇನ್ನುಳಿದ ಕೆಲ ಕೊರೊನಾ ವಾರಿಯರ್ಸ್‍ಗೂ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಚಿನ್ನ ಕೊಳ್ಳಬೇಡಿ ಎಣ್ಣೆ ಬಳಸದಿರಿ ಎಂಬ ಮೋದಿಯವರ ಕರೆಯ ಹಿಂದಿನ ಅಸಲಿ ರಹಸ್ಯ ಬಯಲು!
ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ದೇಶದ ಜನತೆಗೆ ಕೆಲವು ಮಹತ್ವದ ಮನವಿಗಳನ್ನು ಮಾಡಿದ್ದಾರೆ. ಚಿನ್ನ ಖರೀದಿಸಬೇಡಿ, ವಾಹನ ಬಳಕೆ ತಗ್ಗಿಸಿ, ವಿದೇಶಿ ಪ್ರವಾಸ ಬೇಡ ಎಂಬಂತಹ ಸಲಹೆಗಳ...








