ವ್ಯಕ್ತಿಯೊಬ್ಬ 82 ವರ್ಷದ ವೃದ್ಧೆಯನ್ನು ಹತ್ಯೆ ಮಾಡಿ ನಾನೇ ದೇವರು ಎಂದು ಹೇಳುತ್ತಿರುವ ಘಟನೆಯೊಂದು ರಾಜಸ್ಥಾನದ ಉದಯ್ ಪುರದಲ್ಲಿ ನಡೆದಿದೆ.
60 ವರ್ಷದ ವೃದ್ಧನೊಬ್ಬ ಹೀಗೆ ಕೊಲೆ ಮಾಡಿ ತಾನೇ ದೇವರು ಎಂದು ಹೇಳುತ್ತಿದ್ದಾನೆ. ಇಬ್ಬರು ಅಪ್ರಾಪ್ತ ಬಾಲಕರು ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ವೃದ್ಧೆಯ ಎದೆಗೆ ವೃದ್ಧ ಕೈ ಮುಷ್ಟಿ ಕಟ್ಟಿ ಹೊಡೆದಿದ್ದಾನೆ. ನಂತರ ಜುಟ್ಟು ಹಿಡಿದು ಛತ್ರಿಯಿಂದ ಅನೇಕ ಬಾರಿ ಥಳಿಸಿದ್ದಾನೆ. ಈ ಕುರಿತು ವಿಡಿಯೋ ವೈರಲ್ ಆಗಿದೆ.
ಆನಂತರ ಆತ ತನ್ನನ್ನು ತಾನು ಶಿವನ ಅವತಾರ ಎಂದು ಹೇಳಿಕೊಂಡಿದ್ದಾನೆ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ತಾನು ಮದ್ಯದ ಅಮಲಿನಲ್ಲಿ ಇರುವುದಾಗಿ ಹೇಳಿದ್ದಾನೆ. ಸದ್ಯ ಈ ಕುರಿತು ಪೊಲೀಸರು ಸಂಪೂರ್ಣ ತನಿಖೆ ನಡೆಸುತ್ತಿದ್ದಾರೆ.








