ನರ್ಸ್ ವೇಷದಲ್ಲಿ ಮಹಿಳೆಯೊಬ್ಬರನ್ನು ಕೊಲ್ಲಲು ಯತ್ನಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿ, ತನಿಖೆ ಆರಂಭಿಸಿದ್ದಾರೆ.
ತನಿಖೆ ಸಂದರ್ಭದಲ್ಲಿ ಹಲವು ವಿಷಯಗಳ ಕುರಿತು ಆರೋಪಿ ಬಾಯಿ ಬಿಟ್ಟಿದ್ದಾರೆ. ಆರೋಪಿ ಅನುಷಾ, ಸ್ನೇಹಾಳ ಪತಿ ಅರುಣ್ ಮೇಲಿನ ಪ್ರೀತಿಯಿಂದ ಈ ಕೃತ್ಯ ಎಸಗಲು ಮುಂದಾಗಿದ್ದಳು ಎನ್ನಲಾಗಿದೆ. ಕಳೆದ ಒಂದು ವಾರದ ಹಿಂದೆ ಗರ್ಭಿಣಿ ಸ್ನೇಹಾ ಆಸ್ಪತ್ರೆಗೆ ದಾಖಲಾಗಿದ್ದರು. ಹೆರಿಗೆಯಾದ ನಂತರ ಡಿಸ್ಟಾರ್ಜ್ ಮಾಡಲಾಗಿತ್ತು. ಆದರೆ ಮಗುವಿನ ಆರೋಗ್ಯ ಸರಿಯಾಗಿ ಇಲ್ಲದೇ ಇರುವುದರಿಂದ ಮಗುವನ್ನು ಅಲ್ಲೇ ದಾಖಲಿಸಲಾಗಿತ್ತು.
ಸ್ನೇಹಾಳನ್ನು ಕೊಂದು ಅರುಣ್ನನ್ನು ಪಡೆದುಕೊಳ್ಳುವುದು ಆರೋಪಿಯ ಉದ್ಧೇಶವಾಗಿತ್ತು. ಹೀಗಾಗಿ ನರ್ಸ್ ಕೋಟ್ ಧರಿಸಿ ಯಾರಿಗೂ ತಿಳಿಯದಂತೆ ಆಸ್ಪತ್ರೆ ಕೊಠಡಿಗೆ ಭೇಟಿ ನೀಡಿದ್ದೆ. ಈ ಸಂದರ್ಭದಲ್ಲಿ ತಾನು ಮಗುವಿನ ತಾಯಿಗೆ ಆರೋಪಿಯು ಇಂಜೆಕ್ಷನ್ ಮಾಡಲು ಮುಂದಾಗಿದ್ದೆ. ಸ್ನೇಹಾಳ ಕೈ ಹಿಡಿದು ಸಿರಿಂಜ್ ಹಾಕಲು ಯತ್ನಿಸಿದ್ದೆ. ಈ ವೇಳೆ ಸಿರಿಂಜಿನಲ್ಲಿ ಯಾವುದೇ ಔಷಧಿ ಇರದೇ ಇದ್ದಿದ್ದನ್ನು ನೋಡಿದ ಆಕೆ ರಾದ್ಧಾಂತ ಮಾಡಿದ್ದರಿಂದ ಆಸ್ಪತ್ರೆ ಸಿಬ್ಬಂದಿ ಆಗಮಿಸಿದ್ದರು ಎಂದು ಹೇಳಿದ್ದಾಳೆ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ಮತ್ತಷ್ಟು ತನಿಖೆ ಕೈಗೊಂಡಿದ್ದಾರೆ.








