ಯಾರ ಅದೃಷ್ಟ ಹೇಗೆ ಬದಲಾಗುತ್ತದೆ ಎಂಬುವುದು ಹೇಳಲು ಆಗುವುದಿಲ್ಲ. ಆದರೆ ಅದೃಷ್ಟ ಖುಲಾಯಿಸಿತು ಅಂದರೆ ಕಷ್ಟ ಕಾರ್ಪಣ್ಯಗಳಿಂದ ಮುಕ್ತನಾಗುವುದರಲ್ಲಿ ಸಂಶಯವೇ ಇಲ್ಲ. ಇದಕ್ಕೆ ಇಲ್ಲೊಬ್ಬ ರೈತನೇ ಉದಾಹರಣೆಯಾಗಿದ್ದಾರೆ.
ಸದ್ಯ ಮಾರುಕಟ್ಟೆಯಲ್ಲಿ ಟೊಮೆಟೊಗ ಚಿನ್ನದ ಬೆಲೆ ಬಂದಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಗ್ರಾಮದ ರೈತ ಸಾಗರ ಗೋಪಾಲ ಮಗದುಮ್ ಎಂಬುವವರು 9 ಎಕರೆ ಪ್ರದೇಶದಲ್ಲಿ ಟೊಮೆಟೊ ಬಳೆದು ಈಗ ಕೈತುಂಬ ಹಣ ಎಣಿಸುತ್ತಿದ್ದಾರೆ.
ಮೂಲತಃ ಪಕ್ಕದ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಉಮನವಾಡಿಯವರಾದ ಈ ರೈತರು ಕಳೆದ 30 ವರ್ಷಗಳಿಂದ ಯಕ್ಸಂಬಾ ಪಟ್ಟಣದಲ್ಲಿ ವಾಸಿಸುತ್ತಿದ್ದಾರೆ. ಇವರು ಪ್ರತಿ ವರ್ಷವೂ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದರು. ಈ ವರ್ಷ 9 ಎಕರೆ ಪ್ರದೇಶದಲ್ಲಿ ಟೊಮೆಟೋ ಬೆಳೆದು ಕೋಟ್ಯಾಂತರ ಲಾಭ ಮಾಡಿಕೊಂಡಿದ್ದಾರೆ. ಎಕರೆಗೆ ಟನ್ ಗಟ್ಟಲೇ ಇಳುವರಿ ಬಂದು ಅತ್ಯುತ್ತಮ ದರ ಸಿಕ್ಕಿದೆ. ಟೊಮೆಟೊ ಬೆಳೆಯಿಂದ ಬಂಪರ್ ಲಾಭ ಕೈಗೆ ಸಿಕ್ಕಿದ್ದು, ರೈತನ ಮೊಗದಲ್ಲಿ ಮಂದಹಾಸದ ಜೊತೆಗೆ ಸಂತೃಪ್ತಿ ಎದ್ದು ಕಾಣುತ್ತಿದೆ.
ದೇಶಾದ್ಯಂತ ಟೊಮೆಟೊಗೆ ಬಂಪರ್ ಬೆಲೆ ಸಿಗುತ್ತಿದೆ. ಹೀಗಾಗಿ ಕೈತುಂಬ ಹಣ ಎಣೆಸುತ್ತಿದ್ದಾರೆ.







