ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಆಜ಼ಂ, ಟಿ20 ಕ್ರಿಕೆಟ್ನಲ್ಲಿ 10ನೇ ಶತಕ ಬಾರಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಅಲ್ಲದೇ ಆ ಮೂಲಕ ಕ್ರಿಸ್ ಗೇಯ್ಲ್ ನಂತರ 10ನೇ ಟಿ20 ಶತಕ ಬಾರಿಸಿದ ವಿಶ್ವದ 2ನೇ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆ ಬರೆದಿದ್ದಾರೆ.
ಲಂಕಾ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕೊಲಂಬೋ ಸ್ಟ್ರೈಕರ್ಸ್ ಪರ ಆಡುತ್ತಿರುವ ಬಾಬರ್ ಆಜ಼ಂ, ಗಾಲೆ ಟೈಟನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಶತಕ ಸಿಡಿಸಿ ಸಂಭ್ರಮಿಸಿದರು. ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಬಾಬರ್ ಆಜ಼ಂ, ಕೇವಲ 59 ಬಾಲ್ಗಳಲ್ಲಿ 8 ಬೌಂಡರಿ ಹಾಗೂ 5 ಸಿಕ್ಸ್ ಮೂಲಕ 104 ರನ್ಗಳಿಸಿ ಅಬ್ಬರಿಸಿದರು. ಇವರ ಈ ಶತಕದ ನೆರವಿನಿಂದ ಕೊಲಂಬೋ ಸ್ಟ್ರೈಕರ್ಸ್ ತಂಡ 7 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತು.
ಈ ಪ್ರದರ್ಶನದೊಂದಿಗೆ ಬಾಬರ್ ಆಜ಼ಂ, ಟಿ20 ಕ್ರಿಕೆಟ್ನಲ್ಲಿ ತಮ್ಮ 10ನೇ ಶತಕ ದಾಖಲಿಸಿದರು. ಆ ಮೂಲಕ ಟಿ20 ಕ್ರಿಕೆಟ್ನಲ್ಲಿ ವೆಸ್ಟ್ ಇಂಡೀಸ್ನ ಮಾಜಿ ಕ್ರಿಕೆಟಿಗ ಕ್ರಿಸ್ ಗೇಯ್ಲ್ ನಂತರದಲ್ಲಿ ಹೆಚ್ಚು ಶತಕ ಬಾರಿಸಿದ 2ನೇ ಬ್ಯಾಟ್ಸ್ಮನ್ ಎನಿಸಿದರು. ಟಿ20 ಕ್ರಿಕೆಟ್ನಲ್ಲಿ ಹೆಚ್ಚು ಶತಕ ದಾಖಲಿಸಿದ ಬ್ಯಾಟರ್ಗಳ ಸಾಲಿನಲ್ಲಿ ಗೇಯ್ಲ್ ಅಗ್ರ ಸ್ಥಾನದಲ್ಲಿದ್ದು, ಈವರೆಗೂ 22 ಶತಕ ದಾಖಲಿಸಿದ್ದಾರೆ. ಟಿ20 ಕ್ರಿಕೆಟ್ನಲ್ಲಿ 10ನೇ ಶತಕ ಬಾರಿಸಿದ ಬಾಬರ್ ಆಜ಼ಂ, ಆ ಮೂಲಕ ಈ ಮೈಲಿಗಲ್ಲು ತಲುಪಿದ ಏಷ್ಯಾದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. ಬಾಬರ್ ಆಜ಼ಂ ನಂತರದಲ್ಲಿ ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ 8 ಶತಕಗಳೊಂದಿಗೆ 2ನೇ ಸ್ಥಾನದಲ್ಲಿದ್ದಾರೆ.
ಟಿ20 ಕ್ರಿಕೆಟ್ನಲ್ಲಿ ಹೆಚ್ಚು ಶತಕಗಳು:
ಕ್ರಿಸ್ ಗೇಲ್ – 463 ಪಂದ್ಯಗಳಲ್ಲಿ 22 ಶತಕ
ಬಾಬರ್ ಆಜ಼ಂ – 264 ಪಂದ್ಯಗಳಲ್ಲಿ 10 ಶತಕ
ಮೈಕೆಲ್ ಕ್ಲಿಂಗರ್ – 206 ಪಂದ್ಯಗಳಲ್ಲಿ 8 ಶತಕ
ಡೇವಿಡ್ ವಾರ್ನರ್ – 356 ಪಂದ್ಯಗಳಲ್ಲಿ 8 ಶತಕ
ವಿರಾಟ್ ಕೊಹ್ಲಿ – 374 ಪಂದ್ಯಗಳಲ್ಲಿ 8 ಶತಕ
Cricket, Babar Azam, T20 Hundreds, Sports Karnataka








