ಸೆಪ್ಟೆಂಬರ್ 28 ರಿಂದ ಆರಂಭವಾಗಲಿರುವ ಏಷ್ಯನ್ ಗೇಮ್ಸ್ಗೆ (Asian Games 2023) ಭಾರತ ತಂಡ ಪ್ರಕಟಿಸಲಾಗಿದ್ದು, ಏಷ್ಯಾಕಪ್ (Asia Cup 2023) ಹಾಗೂ ವಿಶ್ವಕಪ್ (ODI World Cup 2023) ನಡೆಯುವುದರಿಂದ ಭಾರತ ಬಿ ತಂಡವನ್ನು ಏಷ್ಯನ್ ಗೇಮ್ಸ್ಗೆ ಕಳುಹಿಸಲು ಬಿಸಿಸಿಐ ನಿರ್ಧರಿಸಿದೆ.
ಯುವ ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ಗೆ (Ruturaj Gaikwad) ತಂಡದ ನಾಯಕತ್ವ ನೀಡಲಾಗಿದೆ. ಏಷ್ಯನ್ ಗೇಮ್ಸ್ಗೆ ತಂಡದಲ್ಲಿ ಅವಕಾಶ ಪಡೆಯುವ ನಿರೀಕ್ಷೆಯಲ್ಲಿದ್ದ ಅನುಭವಿ ಶಿಖರ್ ಧವನ್ಗೆ (Shikhar Dhawan) ಮತ್ತೊಮ್ಮೆ ನಿರಾಸೆಯಾಗಿತ್ತು. ಈಗ ಶಿಖರ್ ಧವನ್ ಮೌನ ಮುರಿದಿದ್ದಾರೆ.
ಏಷ್ಯನ್ ಗೇಮ್ಸ್ಗೆ ತಂಡವನ್ನು ಪ್ರಕಟಿಸುವ ಮುನ್ನ ಟೀಂ ಇಂಡಿಯಾದ ನಾಯಕತ್ವವನ್ನು ಶಿಖರ್ ಧವನ್ಗೆ ನೀಡಲಾಗುವುದು ಎಂದು ಹೇಳಲಾಗಿತ್ತು. ಏಷ್ಯನ್ ಕ್ರೀಡಾಕೂಟಕ್ಕೆ ತಂಡದಲ್ಲಿ ಆಯ್ಕೆಯಾಗದಿರುವುದು ಆಘಾತ ತಂದಿದೆ. ನಾನು ಬಲಿಷ್ಠ ಪುನರಾಗಮನ ಮಾಡುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.








