ಕೇವಲ ಕಾಂಗ್ರೆಸ್ ಪಕ್ಷವಷ್ಟೇ ಅಲ್ಲ, ಈಗ ಕಾಂಗ್ರೆಸ್ ಸರ್ಕಾರದಲ್ಲೂ ಎರಡು ಗುಂಪುಗಳಾಗಿವೆ ಎಂದು ಬಿಜೆಪಿ ಮುಖಂಡ ಛಲವಾದಿ ನಾರಾಯಣ ಸ್ವಾಮಿ ಆರೋಪಿಸಿದ್ದಾರೆ.
ಮಲ್ಲೇಶ್ವರನ ಬಿಜೆಪಿ ಕಚೇರಿಯಲ್ಲಿ ಮಾತನಾಡುತ್ತಿದ್ದ ಅವರು, ಇಂಡಿಕೇಟ್ ಸರ್ಕಾರ ಮತ್ತು ಸಿಂಡಿಕೇಟ್ ಸರ್ಕಾರ ಎಂದು ಎರಡು ಗುಂಪುಗಳು ಸರ್ಕಾರದ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದ್ದಾರೆ.
ಇಂಡಿಕೇಟ್ ಸರ್ಕಾರಕ್ಕೆ ಡಿಕೆ ಶಿವಕುಮಾರ್ ನಾಯಕರಾದ್ರೆ, ಸಿಂಡಿಕೇಟ್ ಸರ್ಕಾರಕ್ಕೆ ಸಿದ್ದರಾಮಯ್ಯ ನಾಯಕರಾಗಿದ್ದಾರೆ. ಹೈಕಮಾಂಡ್ ಹಣ ಸಂಗ್ರಹಣೆಯ ಟಾರ್ಗೆಟ್ ನಿಡಿರೋದ್ರಿಂದ ೆರಡೂ ಗುಂಪುಗಳು ಪೈಪೋಟಿಗೆ ಬಿದ್ದು ಸುಲಿಗೆ ಮಾಡ್ತಾ ಇವೆ ಎಂದು ನಾರಾಯಣಸ್ವಾಮಿ ದೂರಿದ್ದಾರೆ.








