ಲಕ್ನೋ: ಇತ್ತೀಚೆಗೆ ಪುಢಾರಿಗಳ ಹಾವಳಿ ಮಿತಿ ಮೀರುತ್ತಿದೆ. ಹಲವು ಯುವಕರಂತೂ ರೌಡಿಗಳಂತೆ ವರ್ತಿಸುತ್ತಿದ್ದಾರೆ. ಇಲ್ಲೊಂದು ಗುಂಪು ಉಚಿತವಾಗಿ ಚಿಕನ್ ನೀಡಿಲ್ಲ ಎಂಬ ಕಾರಣಕ್ಕೆ ಯುವಕನಿಗೆ ಮನಬಂದಂತೆ ಥಳಿಸಿದ ಘಟನೆ ಉತ್ತರಪ್ರದೇಶದ (Uttarpradesh) ಲಲಿತ್ಪುರ ನಲ್ಲಿ ನಡೆದಿದೆ.
ಚಪ್ಪಲಿಯಿಂದ ಯುವಕನಿಗೆ ಥಳಿಸುತ್ತಿರುವ ವೀಡಿಯೋವನ್ನು ವೈರಲ್ ಆಗಿದೆ. ಥಳಿತಕ್ಕೊಳಗಾದ ಯುವಕನನ್ನು ಸುಜನ್ ಅಹಿರ್ವಾರ್ ಎಂದು ಗುರುತಿಸಲಾಗಿದೆ ಸುಜನ್ ಗ್ರಾಮದಿಂದ ಗ್ರಾಮಕ್ಕೆ ತನ್ನ ಬೈಕ್ ನಲ್ಲಿ ಚಿಕನ್ ಮಾರಾಟ (Chicken Sale) ಮಾಡುತ್ತಿದ್ದ.
ಈ ಸಂದರ್ಭದಲ್ಲಿ ಆತ ಬೈಕ್ ನಲ್ಲಿ ಹೋಗುತ್ತಿದ್ದಾಗ ಕುಡಿದ ಮತ್ತಿನಲ್ಲಿದ್ದ ಗುಂಪೊಂದು ಸುಜನ್ನ ಅಡ್ಡ ಹಾಕಿ ಉಚಿತ ಚಿಕನ್ ನೀಡುವಂತೆ ಕೇಳಿದೆ. ಇದಕ್ಕೆ ಸುಜನ್ ಒಪ್ಪಿಲ್ಲ. ಇದರಿಂದ ಕ್ರೋಧಗೊಂಡ ಗುಂಪು ಚಪ್ಪಲಿಯಿಂದ ಹಲ್ಲೆ ನಡೆಸಿದೆ. ಈ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತ ಪೊಲೀಸರು ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ








