ಆಸ್ಸಾಂನ ಕ್ಯಾಚಾರ್ ಜಿಲ್ಲೆಯ ಮದರದಲ್ಲಿ ಹಾಸ್ಟೆಲ್ ಕೊಠಡಿಯಲ್ಲಿ 12 ವರ್ಷದ ವಿದ್ಯಾರ್ಥಿಯ ಶಿರಚ್ಛೇದಿತ ಶವ ಪತ್ತೆಯಾಗಿದೆ.
ದಾರುಸ್ ಸಲಾಂ ಹಾಫಿಝಿಯಾ ಮದರಸಾದಲ್ಲಿ ಈ ಘಟನೆ ನಡೆದಿದೆ. ವಿದ್ಯಾರ್ಥಿ ಊಟ ಮುಗಿಸಿ ತನ್ನ ಕೊಠಡಿಯಲ್ಲಿ ಮಲಗಲು ಹೋಗ, ಮರುದಿನ ಬೆಳಿಗ್ಗೆಯಾದರೂ ಬಂದಿರಲಿಲ್ಲ. ಆ ನಂತರ ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಮೃತ ವಿದ್ಯಾರ್ಥಿಯನ್ನು ರಬಿಜುಲ್ ಹುಸೇನ್ ಎಂದು ಗುರುತಿಸಲಾಗಿದೆ.
ಬೋಧಕರೊಬ್ಬರು ಫಜ್ರ್ ಪ್ರಾರ್ಥನೆಗೆ ವಿದ್ಯಾರ್ಥಿಗಳನ್ನು ಕರೆಯಲು ಹಾಸ್ಟೆಲ್ ಕೋಣೆಗೆ ಪ್ರವೇಶಿಸಿದಾಗ ನೆಲದ ಮೇಲೆ ವಿದ್ಯಾರ್ಥಿಯ ಶಿರಚ್ಛೇದಿತ ಶವ ಪತ್ತೆಯಾಗಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಶಿಕ್ಷಕರು ಮತ್ತು 20 ವಿದ್ಯಾರ್ಥಿಗಳನ್ನು ಬಂಧಿಸಿ, ಪೊಲೀಸರು ತನಿಖೆ ಕೈಗೊಂಡಿದ್ದಾರೆ.








