ಬೆಂಗಳೂರು: ರಾಜ್ಯದ ನಾಯಕರು ವೇದಿಕೆಗಳಲ್ಲಿ ಎಷ್ಟೇ ಕಚ್ಚಾಡಿದರೂ ವೈಯಕ್ತಿಕವಾಗಿ ತುಂಬಾ ಆತ್ಮೀಯರಾಗಿರುತ್ತಾರೆ. ಅದಕ್ಕೆ ಸಾಕಷ್ಟು ಸಾಕ್ಷಿಗಳು ನಮ್ಮಲ್ಲಿದ್ದು, ಆ ಸಾಲಿಗೆ ಇನ್ನೊಂದು ಅಪರೂಪದ ಘಟನೆ ಸೇರ್ಪಡೆಯಾಗಲಿದೆ. ಸಿಎಂ ಬಿ.ಎಸ್.ಯಡಿಯೂರಪ್ಪನವರಿಗೆ ಇದೇ ಫೆಬ್ರವರಿ 27ರಂದು ಹುಟ್ಟು ಹಬ್ಬದ ಸಂಭ್ರಮ. 77 ವರ್ಷ ದಾಟಿ 78ನೇ ವರ್ಷಕ್ಕೆ ಬಿಎಸ್ ವೈ ಕಾಲಿಡಲಿದ್ದಾರೆ. ಆ ದಿನ ಅದ್ಧೂರಿಯಾಗಿ ಸಿಎಂ ಹುಟ್ಟುಹಬ್ಬ ಆಚರಿಸಲಾಗುತ್ತಿದ್ದು, ಆ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸುತ್ತಿರುವುದು ಮಾಜಿ ಸಿಎಂ ಸಿದ್ದರಾಮಯ್ಯ.
ಹೌದು..! ಇಂದು ಬಿಎಸ್ ವೈ ಮಗ ಬಿ.ವೈ.ವಿಜಯೇಂದ್ರ ವಿಪಕ್ಷ ನಾಯಕ ಸಿದ್ದರಾಮಯ್ಯನವರ ನಿವಾಸಕ್ಕೆ ಭೇಟಿ ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ಭೇಟಿ ಬಳಿಕ ಮಾತನಾಡಿದ ವಿಜಯೇಂದ್ರ, “ಫೆ.27ಕ್ಕೆ ನಮ್ಮ ತಂದೆ 77ವರ್ಷ ದಾಟಿ 78ಕ್ಕೆ ಕಾಲಿಡುತ್ತಿದ್ದಾರೆ. ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯನವರೇ ಮುಖ್ಯ ಅತಿಥಿ. ಹೀಗಾಗಿ ಅವರನ್ನು ಆಹ್ವಾನಿಸಲು ಬಂದಿದ್ದೆ,” ಎಂದು ಹೇಳಿದ್ದಾರೆ
fifaworldcup-2026: ಫುಟ್‍ಬಾಲ್ ಅಂಗಳದ ಈಜಿಪ್ಟ್ ಚಿರತೆ ಮಹಮ್ಮದ್ ಸಲಾಹ್.. ಆಟದಷ್ಟೇ ಹೃದಯ ಗೆದ್ದ ಮಾಣಿಕ್ಯ..!⚽👑🇪🇬 🐆
ಒಂದು ಕ್ಷಣ ಕಣ್ಣುಮುಚ್ಚಿ.. ಆಮೇಲೆ ಓದಿ ನೋಡಿ.. ಆಗ ನಿಮ್ಮಲ್ಲೂ ಮೂಡಬಹುದೊಂದು ಭಾವನೆ.. ಹೀಗೂ ಇದೆಯಾ ಅನ್ನೋ ಯೋಚನೆ..! 🚀🔥⚽ ಇದು ಒಂದು ಸಣ್ಣ ಹಳ್ಳಿಯ ಕೆಳ...







