ಬೆಂಗಳೂರು : ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಆರೋಗ್ಯ ಈಗ ಸ್ಥಿರವಾಗಿದೆ ಎನ್ನಲಾಗಿದೆ.
ಅಪೊಲ್ಲೋ ಆಸ್ಪತ್ರೆಯ ಹೆಲ್ತ್ ಬುಲೆಟಿನ್ ಪ್ರಕಾರ, ವೈದ್ಯರು ನೀಡುತ್ತಿರುವ ಚಿಕಿತ್ಸೆಗೆ ಸೂಕ್ತವಾಗಿ ಸ್ಪಂದಿಸುತ್ತಿದ್ದಾರೆ. ಹೃದಯ ಬಡಿತ (pulse) ಸಾಮಾನ್ಯವಾಗಿವೆ ಎಂದು ಹೇಳಲಾಗಿದೆ.
ಬಳಲಿಕೆ ಮತ್ತು ಒಂದು ಬಗೆಯ ಚಡಪಡಿಕೆ ಅನುಭವಿಸುತ್ತಿದ್ದರು. ಡಾ ಸತೀಶ್ ಚಂದ್ರ ನೇತೃತ್ವದ ಅಪೊಲ್ಲೋ ಆಸ್ಪತ್ರೆ ವೈದ್ಯರ ತಂಡ ಕುಮಾರಸ್ವಾಮಿಯರಿಗೆ ಚಿಕಿತ್ಸೆ ನೀಡುತ್ತಿದ್ದಾರೆ.