ಲಖನೌ: ಉತ್ತರಪ್ರದೇಶದ ಸೋನಾಭದ್ರ ಜಿಲ್ಲೆಯ ಹರದಿ ಗ್ರಾಮದ ಸಮೀಪ ಸುಮಾರು 3 ಸಾವಿರ ಟನ್ ಚಿನ್ನದ ನಿಕ್ಷೇಪ ಪತ್ತೆಯಾಗಿದೆ. 2005ರಲ್ಲಿಯೇ ಭಾರತೀಯ ಭೂವೈಜ್ಞಾನಿಕ ಸಮಿಕ್ಷೆ ಇಲ್ಲಿ ಅಧ್ಯಯನ ನಡೆಸಿ ಈ ಜಾಗದಲ್ಲಿ ಚಿನ್ನದ ಗಣಿ ಇರುವ ಬಗ್ಗೆ ಸ್ಪಷ್ಟನೆ ನೀಡಿತ್ತು. ಅಲ್ಲದೇ ಈ ಬಗ್ಗೆ 2012ರಲ್ಲಿಯೂ ಕೂಡ ಚಿನ್ನದ ನಿಕ್ಷೇಪ ಇರುವ ಬಗ್ಗೆ ಮತ್ತೊಮ್ಮೆ ದೃಢೀಕರಣ ನೀಡಿತ್ತು. ಈ ವಿಷಯವಾಗಿ ಯಾವುದೇ ಕೆಲಸಗಳು ಶುರುವಾಗಿರಲಿಲ್ಲ. ಆದ್ರೆ ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಬಂದ ಮೇಲೆ ಚಿನ್ನದ ನಿಕ್ಷೇಪಕ್ಕೆ ಸಂಬಂಧಿಸಿದ ಕಾರ್ಯಗಳಿಗೆ ವೇಗ ನೀಡಲಾಯಿತು. ಪರಿಣಾಮವಾಗಿ ಸೋನಾಭದ್ರ ಜಿಲ್ಲೆಯಲ್ಲಿ ಸುಮಾರು 3 ಸಾವಿರ ಟನ್ ಬಂಗಾರದ ನಿಕ್ಷೇಪವಿರುವುದು ದೃಢಪಟ್ಟಿದ್ದು ಹರಾಜು ಪ್ರಕ್ರಿಯೆಗೆ ಸಿದ್ಧತೆ ನಡೆಯುತ್ತಿದೆ. ಸದ್ಯ ಹರಾಜು ಪ್ರಕ್ರಿಯೆ ನಡೆಸಲು ಸರ್ಕಾರದಿಂದ 7 ಸದಸ್ಯರ ಟೀಮ್ ರೆಡಿಯಾಗಿದೆ.
ನೆನಪಿನ ಪುಟಗಳಿಂದ: ಡಾ.ಮನಮೋಹನ್ ಸಿಂಗ್ ಸಹಿ ನೋಟಿನ ಮೇಲೆ
ಡಾ.ಮನಮೋಹನ್ ಸಿಂಗ್ ಅವರು ವಿಶ್ವದ ಶ್ರೇಷ್ಠ ಅರ್ಥಶಾಸ್ತ್ರಜ್ಞರಲ್ಲಿ ಒಬ್ಬರು. ಅವರು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಪದವಿ ಪಡೆದರು ತದನಂತರದಲ್ಲಿ ಅಂದರೆ 1982ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ನ ಗವರ್ನರ್...