ಆನೇಕಲ್ : ಬಂಡಾಪುರ ಗ್ರಾಮದಲ್ಲಿ ತಂದೆಯ ಆಸ್ತಿ ಲಪಟಾಯಿಸಲು ಮಗಳು ಹಾಗೂ ಅಳಿಯ ನಿಧಿಯ ನಾಟಕ ಹೂಡಿರುವ ಘಟನೆಯೊಂದು ನಡೆದಿದೆ.
ತಿಮ್ಮರಾಯಪ್ಪ ದಂಪತಿ ಹಾಗೂ ಪುತ್ರ ಪ್ರದೀಪ್ ಕುಮಾರ್ ಎಂಬುವವರಿಗೆ ನಿಧಿಯ ಆಸೆ ತೋರಿಸಿ ಲಕ್ಷಾಂತರ ರೂಪಾಯಿ ವಂಚಿಸಲಾಗಿದೆ. ತಿಮ್ಮರಾಯಪ್ಪ ಅವರ ಮಗಳು ಮತ್ತು ಅಳಿಯನೇ ಮೋಸ ಮಾಡಿದ್ದಾರೆ. ಪುತ್ರಿ ಮಂಜುಳ ಹಾಗೂ ಅಳಿಯ ಮಂಜುನಾಥ್, ತಮಿಳುನಾಡು ಮೂಲದ ಕಳ್ಳ ಜ್ಯೋತಿಷಿ ನವೀನ್ ಎಂಬ ವ್ಯಕ್ತಿಯನ್ನು ಮನೆಗೆ ಕರೆದುಕೊಂಡು ಬಂದಿದ್ದಾರೆ.
ಆಗ ಪೂಜೆ ಮಾಡಿದರೆ, ನಿಧಿ ಸಿಗುತ್ತದೆ. ಅದು ಮನೆಯಲ್ಲಿಯೇ ಇದೆ ಎಂದು ನಂಬಿಸಿದ್ದಾರೆ. ನಿಧಿ ತೆಗಿಬೇಕಾದರೆ ಪೂಜೆ ಮಾಡಬೇಕು. ಅದಕ್ಕೆಲ್ಲ ದುಡ್ಡು ಆಗುತ್ತೆ ಅಂತ ನವೀನ್ ಕಥೆ ಕಟ್ಟಿದ್ದಾನೆ. ಆಗ ದುಡ್ಡಿಗಾಗಿ ಮಗಳು ಹಾಗೂ ಅಳಿಯ ಬೇರೆ ಓರ್ವ ವ್ಯಕ್ತಿ ಬಳಿ ಕರೆದುಕೊಂಡು ಹೋಗಿ, ಜಮೀನನ್ನು ಅಡವಿಟ್ಟು 17 ಲಕ್ಷ ರೂ. ತಂದು ಹೋಮಹವನಕ್ಕೆಂದು ನೀಡಿದ್ದಾರೆ. ನಂತರ, ತಿಮ್ಮರಾಯಪ್ಪ ಹಾಗೂ ಸಹೋದರ ಪ್ರದೀಪ್ ಕುಮಾರ್ ಕೈನಲ್ಲಿ ಸಹಿ ಮಾಡಿಸಿಕೊಂಡು ಜಮೀನನ್ನು ಖಾಸಗಿ ವ್ಯಕ್ಯಿಗೆ ಆಗ್ರಿಮೆಂಟ್ ಮಾಡಿಕೊಟ್ಟು ಯಾರಿಗೂ ಗೊತ್ತಿಲ್ಲದಂತೆ 33 ಲಕ್ಷ ರೂ. ಹಣ ಪಡೆದು ವಂಚಿಸಿದ್ದಾರೆ ಎನ್ನಲಾಗಿದೆ.








