ನವದೆಹಲಿ: ಲಡಾಕ್ನಲ್ಲಿ ಭಾರತದ ಜತೆ ಗಡಿತಂಟೆ ಮಾಡುತ್ತಿರುವ ಚೀನಾ, ನೇಪಾಳವನ್ನು ಭಾರತದ ಮೇಲೆ ಎತ್ತಿಕಟ್ಟಿದ ಬಳಿಕ, ಇದೀಗ ಬಾಂಗ್ಲಾದೇಶದತ್ತ ದೃಷ್ಟಿ ಹರಿಸಿದೆ.
೨ ಶತಮಾನಗಳ ಹಿಂದಿನ ಗಡಿ ವಿಚಾರವಾಗಿ ನೇಪಾಳ ಭಾರತದ ಜತೆ ಕಿರಿಕ್ ಮಾಡಿಕೊಂಡಿದೆ. ನೇಪಾಳದ ವಾಯುವ್ಯ ಭಾಗದಲ್ಲಿರುವ ಲಿಂಪಿಯಾಧುರಾ, ಲಿಪುಲೇಖ್, ಕಾಲಾಪಾನಿ ಭಾರತದ ನಿಯಂತ್ರಣದಲ್ಲಿದೆ. ಆದರೆ, ಈ ಪ್ರದೇಶ ತನಗೇ ಸೇರಿದೆ ಎಂಬ ನಕ್ಷೆಯನ್ನು ನೇಪಾಳದ ಸಂಸತ್ ಇತ್ತೀಚೆಗೆ ಅಂಗೀಕರಿಸಿದೆ. ಇದಕ್ಕೆ ಚೀನಾ ಕುಮ್ಮಕ್ಕು ಕಾರಣ ಎಂಬುದು ಈಗ ಗುಟ್ಟಾಗಿ ಏನೂ ಉಳಿದಿಲ್ಲ.
ಹಲವು ದಶಕಗಳ ಹಿಂದೆಯೇ ಟಿಬೆಟ್ನ್ನು ಆಕ್ರಮಿಸಿಕೊಂಡಿರುವ ಚೀನಾ, ಭಾರತದ ವಿರುದ್ಧ ವಿಷಬೀಜ ಬಿತ್ತುತ್ತಲೇ ಬಂದಿದೆ. ಈಗ ಚೀನಾ ಕಣ್ಣು ಬಿದ್ದಿರುವುದು ಬಾಂಗ್ಲಾದೇಶದ ಮೇಲೆ.
ಬಾಂಗ್ಲಾದೇಶ ಸಂಪೂರ್ಣವಾಗಿ ಅವಲಂಬಿಸಿರುವುದು ಭಾರತವನ್ನು. ಆರ್ಥಿಕ ನೆರವು ಸೇರಿದಂತೆ ಹಲವು ರಾಜತಾಂತ್ರಿಕ ನೆರವನ್ನು ಬಾಂಗ್ಲಾದೇಶ ಭಾರತದಿಂದ ಪಡೆಯುತ್ತದೆ. ಬಾಂಗ್ಲಾದೇಶವನ್ನು ವಿಶ್ವಾಸಕ್ಕೆ ತೆಗೆದುಕೊಂಡರೆ ಭಾರತಕ್ಕೆ ಹೊಡೆತ ಕೊಡಬಹುದು ಎಂಬುದು ಚೀನಾ ಲೆಕ್ಕಾಚಾರ ಇರಬಹುದು ಎನ್ನಲಾಗಿದೆ.
ಬಾಂಗ್ಲಾದೇಶಕ್ಕೆ ರಫ್ತು ಮಾಡುತ್ತಿರುವ ತನ್ನ ಉತ್ಪನ್ನಗಳ ಮೇಲೆ ಶೇ.೯೭ರಷ್ಟು ತೆರಿಗೆ ವಿನಾಯಿತಿ ನೀಡುವುದಾಗಿ ಚೀನಾ ಭರವಸೆ ನೀಡಿದೆ. ಚೀನಾದಿಂದ ಬಾಂಗ್ಲಾದೇಶಕ್ಕೆ ಸುಮಾರು ೫೧೬೧ ಉತ್ಪನ್ನಗಳನ್ನು ಚೀನಾ ರಫ್ತು ಮಾಡುತ್ತಿದೆ. ಈ ೫೧೬೧ ಐಟಂಗಳಿಗೆ ಕೇವಲ ಶೇ.೩ರಷ್ಟು ತೆರಿಗೆ ವಿಧಿಸುತ್ತೇವೆ. ನಮ್ಮ ಐಟಂಗಳನ್ನು ಖರೀದಿಸಿ ಎಂದು ವ್ಯಾಪಾರಿಗಳಿಗೆ ಚೀನಾ ಭರ್ಜರಿ ಆಫರ್ ನೀಡಿದೆ ಎನ್ನಲಾಗಿದೆ.
ಚೀನಾದ ಈ ಆಫರ್ ಬಗ್ಗೆ ಬಾಂಗ್ಲಾದೇಶ ಸರ್ಕಾರದಿಂದ ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಸೈಲೆಂಟ್ ಆಗಿ ಒಂದೊಂದೇ ನೆರೆಯ ರಾಷ್ಟçಗಳನ್ನು ತನ್ನ ಕಂಟ್ರೋಲ್ನಲ್ಲಿಟ್ಟುಕೊಳ್ಳಲು ಚೀನಾ ನಡೆಸುತ್ತಿರುವ ಕುತಂತ್ರ ಸಫಲ ನೀಡುತ್ತದೆಯೇ ಎಂಬುದು ಸದ್ಯದಲ್ಲೇ ಬಹಿರಂಗವಾಗಲಿದೆ








