ಚಿಕ್ಕಮಗಳೂರು : ಚೈತ್ರಾ ಕುಂದಾಪುರ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಈಗ ಸಲೂನ್ ಮಾಲೀಕನಿಗೆ ಬೆದರಿಕೆ ಕರೆ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ.
ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಬಿಜೆಪಿಯಿಂದ ಟಕೆಟ್ ಕೊಡಿಸುವುದಾಗಿ ನಂಬಿಸಿ ಚೈತ್ರಾ ಕುಂದಾಪುರ (Chaithra Kundapura) ಅಂಡ್ ಟೀಂ 5 ಕೋಟಿ ರೂ. ವಂಚನೆ ಮಾಡಿರುವ ಹೊಸ ಹೊಸ ವಿಷಯಗಳು ಬೆಳಕಿಗೆ ಬರುತ್ತಿವೆ. ಕಡೂರಿನ ಸಲೂನ್ ಮಾಲೀಕ ರಾಮುಗೆ ಗಗನ್ ಮತ್ತು ಅವರ ಗುಂಪಿನಿಂದ ಬೆದರಿಕೆ ಕರೆ ಬಂದಿದೆ ಎನ್ನಲಾಗಿದೆ. ಸಲೂನ್ ಮಾಲೀಕ ಧನರಾಜ್ ಕಾಂಗ್ರೆಸ್ ಮುಖಂಡ ಎಂಬ ಸಂಗತಿಯೂ ಹೊರ ಬಿದ್ದಿದೆ. ಗೋವಿಂದಬಾಬು ಹತ್ತಿರ ಹೋಗುವ ಮುನ್ನ 5ನೇ ಆರೋಪಿ ಚನ್ನ ನಾಯ್ಕ್‌ಗೆ ಆರೆಸ್ಸೆಸ್ ಮುಖಂಡನಂತೆ ಕೂದಲು ಶೈನಿಂಗ್ ಮಾಡಿ ಹೇರ್ ಕಟ್ ಮಾಡಿಸಿಕೊಂಡು ಹೋದ ಸಂಗತಿ ಬೆಳಕಿಗೆ ಬರುತ್ತಿದ್ದಂತೆ ಸಲೂನ್ ಮಾಲೀಕ ರಾಮುಗೆ ಬೆದರಿಕೆ ಕರೆ ಬಂದಿದೆ ಎನ್ನಲಾಗಿದೆ.
ಮಾಧ್ಯಮ ಮುಂದೆ ಮಾಹಿತಿ ನೀಡಿದ್ದಕ್ಕೆ ಧನರಾಜ್ ಆಪ್ತ ನೂತನ್ ಸಲೂನ್ ಮಾಲೀಕನಿಗೆ ಧಮ್ಕಿ ಹಾಕಿದ್ದಾನೆ ಎನ್ನಲಾಗಿದೆ. ಚೈತ್ರಾ ಕುಂದಾಪುರಗೆ 2018ರಿಂದಲೇ ಕಡೂರಿನ ಲಿಂಕ್ ಇತ್ತು ಅನ್ನೋ ಮಾಹಿತಿ ಕೂಡ ಲಭ್ಯವಾಗಿದೆ.








