ನವದೆಹಲಿ: ಇಂದು ಆಂತಾರಾಷ್ಟಿçÃಯ ಯೋಗ ದಿನ ಹಿನ್ನೆಲೆಯಲ್ಲಿ ಕೊರೆವ ಚಳಿ ಹಾಗೂ ಹಿಮದ ರಾಶಿಯ ನಡುವೆಯೇ ನಮ್ಮ ದೇಶ ಕಾಯುವ ಯೋಧರು ಯೋಗ ಮಾಡಿ ಗಮನ ಸೆಳೆದಿದ್ದಾರೆ.
ಲಡಾಕ್‌ನ ಗಾಲ್ವಾನ್ ಕಣಿವೆಯಲ್ಲಿ ಭಾರತ-ಚೀನಾ ಸೈನಿಕರ ನಡುವೆ ನಡೆದ ಘರ್ಷಣೆಯಿಂದ ಭಾರತ-ಚೀನಾ ಗಡಿಯಲ್ಲಿ ಉದ್ವಿಗ್ನ ವಾತಾವರಣ ಇದ್ದು, ಇದರ ನಡುವೆಯೇ ಸೈನಿಕರು ಯೋಗ ಪ್ರದರ್ಶನ ಮಾಡುವ ಮೂಲಕ ದೇಶಕ್ಕೆ ದೈಹಿಕ ಹಾಗೂ ಮಾನಸಿಕ ಸದೃಢತೆಯ ಸಂದೇಶ ಸಾರಿದರು.

ಲಡಾಖ್ ಸೇರಿದಂತೆ ಭಾರತ-ಚೀನಾ ಗಡಿಯಲ್ಲಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಸಿಬ್ಬಂದಿ ಯೋಗ ಪ್ರದರ್ಶನ ಮಾಡಿದರು.

ಉತ್ತರಾಖಂಡ್‌ನ ಭದ್ರಿನಾಥ್ ಬಳಿ ಇರುವ ೧೪,೦೦೦ ಅಡಿ ಎತ್ತರದ ಗಡಿ ಪ್ರದೇಶದಲ್ಲಿ ಸೇನಾ ಸಿಬ್ಬಂದಿ ಯೋಗ ಮಾಡಿ ಗಮನ ಸೆಳೆದರು. ಹಿಮಚ್ಛಾದಿತ ಪ್ರದೇಶದಲ್ಲಿ ಯೋಧರ ಯೋಗ ಪ್ರದರ್ಶನ ಅತ್ಯಂತ ಗಮನ ಸೆಳೆಯಿತು.
ಅದರಂತೆ ಖರ್ದುಂಗ್ ಲಾ ಗಡಿ ಪ್ರದೇಶದಲ್ಲಿ ೧೮,೦೦೦ ಅಡಿ ಎತ್ತರದ ಪ್ರದೇಶದಲ್ಲಿ ಯೋಧರು ಯೋಗ ಪ್ರದರ್ಶನ ಮಾಡಿದರು.

ಮತ್ತೊಂದೆಡೆ, ಲಡಾಕ್‌ನ ಖರ್ದುಂಗ್ ಲಾ ಪ್ರದೇಶದಲ್ಲಿ ಇಂಡೀ ಟಿಬೇಡಿಯನ್ ಪೊಲೀಸರು ಹಿಮ ಹಿಮ ಕಣಿವೆಯ ಸೆರಗಿನಲ್ಲೇ ಯೋಗ ಮಾಡಿದರು.
ಸಮುದ್ರ ಮಟ್ಟದಿಂದ ೧೮,೮೦೦ ಅಡಿ ಎತ್ತರದಲ್ಲಿರುವ ಸಿಕ್ಕಿಂನ ಭಾರತ-ಟಿಬೆಟ್ ಗಡಿಯಲ್ಲಿ ಯೋಧರು ಯೋಗ ಪ್ರದರ್ಶನ ಮಾಡಿದ್ದು ಗಮನ ಸೆಳೆದಿದೆ.

ಮತ್ತೊಂದೆಡೆ. ಲಡಾಕ್‌ನ ಮತ್ತೊಂದು ಗಡಿಯಲ್ಲಿ ಸಮುದ್ರಮಟ್ಟದಿಂದ ೧೮,೦೦೦ ಅಡಿ ಎತ್ತರದ ಗಡಿ ಪ್ರದೇಶದ ಶೂನ್ಯ ತಾಪಮಾನದಿಂದ ಕೂಡಿದೆ. ಇಲ್ಲಿ ಯೋಧರು ಹಿಮದ ರಾಶಿಯಲ್ಲೇ ಓಡಾಡುತ್ತಾ ಗಡಿ ಕಾವಲು ಮಾಡುತ್ತಾರೆ. ಇಂದು ಅಂತಾರಾಷ್ಟಿçÃಯ ಯೋಗ ದಿನ ಹಿನ್ನೆಲೆಯಲ್ಲಿ ಹಿಮದ ರಾಶಿಯ ಮೇಲೆಯೇ ಯೋಗ ಮಾಡಿದ್ದಾರೆ. ಹಿಮಚ್ಛಾದಿತ ಪರ್ವತಗಳಿರುವ ಗಡಿಯಲ್ಲಿ ನಮ್ಮ ಯೋಧರು ಜೀವದ ಹಂಗು ತೊರೆದು ದೇಶದ ಗಡಿ ಕಾಯುವ ದೃಷ್ಯ ಹೃದಯಕ್ಕೆ ಚುರುಕ್ ಅನ್ನಿಸದೇ ಇರದು. ಹಾಗೆಯೇ ಹಿಮದ ರಾಶಿಯನ್ನೂ ಲೆಕ್ಕಿಸದ ಅವರ ಕ್ರಿಯಾಶೀಲತೆಗೆ ಹ್ಯಾಟ್ಸ್ಆಪ್ ಹೇಳಲೇಬೇಕು ಅನ್ನಿಸದೇ ಇರಲ್ಲ.








