ಯಾದಗಿರಿ: ಇಂದು ಸಂಭವಿಸಿದ ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಯಾದಗಿರಿ ನಗರದ ಹೊರಭಾಗದ ಭೀಮಾನದಿಯ ಕಂಗಳೇಶ್ವರ ಮಂದಿರದಲ್ಲಿ ವಿಶೇಷ ಪೂಜೆ ನಡೆಸಲಾಯಿತು

ಸೂರ್ಯಗ್ರಹಣ ದೋಷ ಪರಿಹಾರ ಹಾಗೂ ಲೋಕಕಲ್ಯಾಣಕ್ಕಾಗಿ ವಿಶೇಷ ಪೂಜೆ ನಡೆಸಿದ ಭಕ್ತರು, ಸೂರ್ಯಗ್ರಹಣ ಸಮಯದಲ್ಲಿ ಭೀಮಾನದಿಯಲ್ಲಿ ಇಳಿದು ಕಾರ್ಯಸಿದ್ದಿಗಾಗಿ ಭಕ್ತರ ಜಪ ತಪ ಮಾಡಿದರು.
ಇದೇ ವೇಳೆ ಯಾದಗಿರಿಯಲ್ಲಿ ಮೋಡದ ನಡುವೆಯೇ ಸೂರ್ಯಗ್ರಹಣ ಗೋಚರವಾಗಿದ್ದು, ನಗರದ ಹೊರಭಾಗದ ಭೀಮಾನದಿ ದಂಡೆಯಲ್ಲಿ ಸೌರಕನ್ನಡ ಹಾಕಿಕೊಂಡು ಸೂರ್ಯಗ್ರಹಣ ವೀಕ್ಷಣೆ ಮಾಡಿ ಜನರು ಖುಷಿಪಟ್ಟರು.









