ಶಿಲ್ಲಾಂಗ್ : ಮೇಘಾಲಯಲ್ಲಿ (Meghalaya) ಪ್ರಭಲ ಭೂಕಂಪ ಸಂಭವಿಸಿದೆ.
ಇಂದು ಸಂಜೆ 6:15ರ ವೇಳೆಗೆ 5.2 ತೀವ್ರತೆ ಪ್ರಬಲ ಭೂಕಂಪನ (Earthquake) ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ಹೇಳಿದೆ. ಈ ಭೂಕಂಪ ರಾಜ್ಯದ ಉತ್ತರ ಗಾರೋ ಬೆಟ್ಟಗಳಲ್ಲಿ ಸಂಭವಿಸಿದೆ. ಪಶ್ಚಿಮ ಬಂಗಾಳ (West Bengal) ಮತ್ತು ಅಸ್ಸಾಂನ (Assam) ಕೆಲವು ಭಾಗಗಳಲ್ಲಿಯೂ ಭೂಮಿ ಕಂಪಿಸಿದ ಅನುಭವವಾಗಿದೆ ಎನ್ನಲಾಗಿದೆ.
ಅಸ್ಸಾಂ ಮತ್ತು ಪಶ್ಚಮಿ ಬಂಗಾಳ ಸಮೀಪದಲ್ಲಿ ಭಾನುವಾರ ರಾತ್ರಿ 11.26ಕ್ಕೆ 2.6 ತೀವ್ರತೆಯ ಭೂಕಂಪ ಸಂಭವಿಸಿದ್ದು, ಭೂಕಂಪದ ಕೇಂದ್ರಬಿಂದು ಹರಿಯಾಣದ ರೋಹ್ಟಕ್ನ ಪೂರ್ವ ಆಗ್ನೇಯಕ್ಕೆ 7 ಕಿಮೀ ದೂರದಲ್ಲಿದೆ ದಾಖಲಾಗಿದೆ.