ಐಸಿಸಿ ಏಕದಿನ ವಿಶ್ವಕಪ್‌ಗೆ ವೇದಿಕೆ ಸಜ್ಜಾಗಿದ್ದು, ಇಂಗ್ಲೆಂಡ್ ತಂಡದ ಸ್ಟಾರ್ ಬ್ಯಾಟ್‌ರ್ ಜೋ ರೂಟ್, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾದ ಮಾಜಿ ಆಟಗಾರ ಸೌರವ್ ಗಂಗೂಲಿ ದಾಖಲೆ ಹಿಂದಿಕ್ಕುವ ನಿರೀಕ್ಷೆಯಲ್ಲಿದ್ದಾರೆ.
ಹಾಲಿ ಚಾಂಪಿಯನ್ ಇಂಗ್ಲೆಂಡ್ ಏಕದಿನ ವಿಶ್ವಕಪ್-2023ರಲ್ಲಿ ಇಂದು ನ್ಯೂಜಿ಼ಲೆಂಡ್ ತಂಡವನ್ನ ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಈ ಪಂದ್ಯಕ್ಕಾಗಿ ಜೋ ರೂಟ್ ಕೂಡ ಭರ್ಜರಿ ತಯಾರಿ ಮಾಡಿಕೊಂಡಿದ್ದು, ಇದರ ನಡುವೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮತ್ತೊಂದು ಮೈಲುಗಲ್ಲು ತಲುಪುವ ನಿರೀಕ್ಷೆ ಹೊಂದಿದ್ದಾರೆ.
ಇಂಗ್ಲೆಂಡ್ ತಂಡದ ಪ್ರಮುಖ ಬ್ಯಾಟರ್ ಆಗಿರುವ ಜೋ ರೂಟ್, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಈವರೆಗೂ 48.82ರ ಬ್ಯಾಟಿಂಗ್ ಸರಾಸರಿಯಲ್ಲಿ 18,555 ರನ್‌ಗಳಿಸಿದ್ದು, ಇದೀಗ 19 ಸಾವಿರ ರನ್‌ಗಳ ಗಡಿದಾಟುವತ್ತ ಮುಖ ಮಾಡಿದ್ದಾರೆ. ಈ ಮೈಲುಗಲ್ಲು ತಲುಪಲು ರೂಟ್ ಅವರಿಗೆ 455 ರನ್‌ಗಳ ಅಗತ್ಯವಿದ್ದು, ಏಕದಿನ ವಿಶ್ವಕಪ್‌ನಲ್ಲಿ ಈ ಸಾಧನೆ ಮಾಡುವ ತವಕದಲ್ಲಿದ್ದಾರೆ.
ಅಲ್ಲದೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೆಚ್ಚು ರನ್‌ಗಳಿಸಿರುವ ಬ್ಯಾಟರ್‌ಗಳ ಸಾಲಿನಲ್ಲಿ ಟೀಂ ಇಂಡಿಯಾದ ಮಾಜಿ ಆಟಗಾರ ಸೌರವ್ ಗಂಗೂಲಿ(18,575 ರನ್‌ಗಳು) ದಾಖಲೆ ಹಿಂದಿಕ್ಕುವ ನಿರೀಕ್ಷೆಯಲ್ಲಿದ್ದಾರೆ. ಇದಕ್ಕಾಗಿ ಜೋ ರೂಟ್ ಅವರಿಗೆ ಕೇವಲ 20 ರನ್‌ಗಳ ಅಗತ್ಯವಿದ್ದು, ನ್ಯೂಜಿ಼ಲೆಂಡ್ ವಿರುದ್ಧದ ಆರಂಭಿಕ ಪಂದ್ಯದಲ್ಲೇ ಈ ಗುರಿ ತಲುಪುವ ಅವಕಾಶ ರೂಟ್ ಅವರಿಗಿದೆ.
ಜೋ ರೂಟ್ ಏಕದಿನ ಕ್ರಿಕೆಟ್‌ನಲ್ಲಿ 6,246 ರನ್‌ಗಳಿಸಿದ್ದು, 48.79ರ ಬ್ಯಾಟಿಂಗ್ ಸರಾಸರಿ ಹೊಂದಿದ್ದಾರೆ. 6,500 ರನ್‌ಗಳನ್ನ ದಾಟಲು ರೂಟ್ ಅವರಿಗೆ 254 ರನ್‌ಗಳ ಅಗತ್ಯವಿದೆ. ಏಕದಿನ ವಿಶ್ವಕಪ್‌ನಲ್ಲಿ ಅತ್ಯಧಿಕ ರನ್‌ಗಳಿಸಿರುವ ಇಂಗ್ಲೆಂಡ್ ಬ್ಯಾಟರ್‌ಗಳ ಸಾಲಿನಲ್ಲಿ ರೂಟ್, ಪ್ರಸ್ತುತ 2ನೇ ಸ್ಥಾನದಲ್ಲಿದ್ದು, 54.14ರ ಸರಾಸರಿಯೊಂದಿಗೆ 758 ರನ್‌ಗಳಿಸಿದ್ದಾರೆ.