ADVERTISEMENT
Friday, August 7, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ಮನರಂಜನೆ

ಕಿಚ್ಚನ ಪಂಚಾಯಿತಿಯಲ್ಲಿ ನಗೆ, ಹೊಗೆ, ಪಿನ್ನು ಮತ್ತು ಎಲಿಮಿನೇಷನ್‌ನ ಟೆನ್ಷನ್ನು!

admin by admin
October 15, 2023
in ಮನರಂಜನೆ, Newsbeat
Share on FacebookShare on TwitterShare on WhatsappShare on Telegram

ಕಿಚ್ಚನ ಪಂಚಾಯಿತಿಯಲ್ಲಿ ನಗೆ, ಹೊಗೆ, ಪಿನ್ನು ಮತ್ತು ಎಲಿಮಿನೇಷನ್‌ನ ಟೆನ್ಷನ್ನು!

ಬಿಗ್‌ಬಾಸ್‌ ಕನ್ನಡ ಹತ್ತನೇ ಸೀಸನ್‌ನ ಮೊದಲ ವೀಕೆಂಡ್‌ ಎಪಿಸೋಡ್‌, ವಾರದ ಕಿಚ್ಚನ ಜೊತೆ ಈಗಷ್ಟೇ ಮುಗಿದಿದೆ. Colors Kannda ಮತ್ತು JioCinemaಗಳಲ್ಲಿ ಏಕಕಾಲದಲ್ಲಿ ಪ್ರಸಾರವಾದ ‘ಕಿಚ್ಚನ ಪಂಚಾಯಿತಿ’ಯಲ್ಲಿ ಹ್ಯಾಂಡ್‌ಸಮ್‌ ಲುಕ್‌ನಲ್ಲಿ ಕಾಣಿಸಿಕೊಂಡ ಸುದೀಪ್‌ ನಗುನಗುತ್ತಲೇ ಎಲ್ಲರನ್ನೂ ಮಾತನಾಡಿಸಿ, ಕಾಲೆಳೆಯುತ್ತಲೇ ಕಿವಿಮಾತನ್ನೂ ಹೇಳಿದರು. ಎಲ್ಲ ಸ್ಪರ್ಧಿಗಳ ವೀಕ್‌ನೆಸ್‌ನಗಳನ್ನು, ಬಿಗ್‌ಬಾಸ್ ಮನೆಯಲ್ಲಿ ನಡೆದ ತಪ್ಪುಗಳನ್ನು, ಸಮರ್ಥರು-ಅಸಮರ್ಥರ ನಡುವಿನ ವ್ಯತ್ಯಾಸಗಳನ್ನು ಸೂಚ್ಯವಾಗಿ ಹೇಳಿದರು. ನಗಿಸಿದರು, ಕಾಲೆಳೆದರು ಹಾಗೆಯೇ ತಪ್ಪುಗಳನ್ನು ಸೂಚ್ಯವಾಗಿಯೇ ತಿದ್ದಿದರು. ಬಿಗ್‌ಬಾಸ್‌ ರೂಲ್ಸ್‌ ಬಗ್ಗೆ ಎಚ್ಚರಿಸಿದರು.

Related posts

devara-maneyalli-deeparadhane-yene-yene-phala

ದೀಪಾರಾಧನೆಯ ರಹಸ್ಯ: ಯಾವ ಎಣ್ಣೆ, ಎಷ್ಟು ಬತ್ತಿ ಹಚ್ಚಿದರೆ ಏನು ಫಲ?

August 6, 2026
hd-kumaraswamy-honours-para-athlete-shilpa-k-shaila-commonwealth-games-bronze-medalist

ಕಾಮನ್‌ವೆಲ್ತ್ ಗೇಮ್ಸ್‌ ; ಪ್ಯಾರಾ ಅಥ್ಲೀಟ್ ಶಿಲ್ಪಾ ಅವರನ್ನು ಗೌರವಿಸಿದ ಹೆಚ್.ಡಿ.ಕುಮಾರಸ್ವಾಮಿ

August 6, 2026

ಶನಿವಾರದ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್‌ ಅವರು ಎಲ್ಲ ಸ್ಪರ್ಧಿಗಳನ್ನು ಮಾತನಾಡಿಸಿ, ಅವರ ಅನುಭಗಳನ್ನು ಹಂಚಿಕೊಂಡರು. ಮನೆಯೊಳಗಿನ ಸ್ಪರ್ಧಿಗಳಿಂದಲೇ ಅವರ ವರ್ತನೆಯ ಕುರಿತು ವಿಶ್ಲೇಷಣೆ ನಡೆಸಿದರು. ‘ನಿಮಗೆ ನೀವೇ ಎಷ್ಟು ಹತ್ತರಲ್ಲಿ ಎಷ್ಟು ಅಂಕಗಳನ್ನು ಕೊಟ್ಟುಕೊಳ್ಳುತ್ತೀರಿ?’ ಎಂದೂ ಕೇಳಿದರು. ಸ್ನೇಹಿತ್‌ನ ಕ್ಯಾಪ್ಟನ್ಸಿಯ ಕೊರತೆಗಳನ್ನು ಸ್ಪರ್ಧಿಗಳ ಬಾಯಿಯಿಂದಲೇ ಹೊರಡಿಸಿದರು. ಮನೆಯೊಳಗಿನ ಹುಡುಗಿಯರು ತುಕಾಲಿ ಸಂತೋಷ್‌ ಅವರಿಗೆ ಬೆಸ್ಟ್ ತಂಗಿಯಾಗುವ ಆಸೆಯನ್ನು ವ್ಯಕ್ತಿಪಡಿಸುವಂತೆ ಮಾಡಿದ್ದಲ್ಲದೆ, ‘ಅಣ್ಣಾ…. ಇವರಿಂದ ಅಣ್ಣ ಅನ್ನಿಸಿಕೊಳ್ಳೋದಕ್ಕಿಂತ ವಾರಪೂರ್ತಿ ಪಾತ್ರೆ ತೊಳೆಯುತ್ತೇನೆ’ ಎಂದು ತುಕಾಲಿ ಅವರು ತಮಾಷೆಯಾಗಿ ಹೇಳಿದ ಮಾತಿಗೆ ಕಿಚ್ಚ, ‘ಅಸ್ತು’ ಅಂದುಬಿಟ್ಟರು!
ನಂತರ ಅವರು ದಾಟಿದ್ದು ‘ನಾಮಿನೇಷನ್’ ಎಂಬ ಅಗ್ನಿಪರೀಕ್ಷೆಗೆ.


ಕಳೆದ ವಾರ ಪ್ರಾರಂಭದ ಎಪಿಸೋಡ್‌ನಲ್ಲಿ ವರ್ತೂರು ಸಂತೋಷ್, ಡ್ರೋಣ್ ಪ್ರತಾಪ್, ಸಂಗೀತಾ ಶೃಂಗೇರಿ, ತನಿಷಾ, ಸ್ನೇಕ್ ಶಾಮ್, ಬುಲೆಟ್ ರಕ್ಷಕ್, ಕಾರ್ತಿಕ್ ಈ ಏಳು ಸ್ಪರ್ಧಿಗಳನ್ನು ಜನರು ಹೋಲ್ಡ್‌ನಲ್ಲಿಟ್ಟಿದ್ರು. ಇಂದು ವರ್ತೂರು ಸಂತೋಷ್ ಅತಿಹೆಚ್ಚು ಮತ ಪಡೆದು ಸಮರ್ಥರ ಗುಂಪಿಗೆ ಸೇರಿ ಸೇಫ್ ಆದರು. ನಂತರ ಸೇಫ್ ಆಗಿದ್ದು ತನಿಷಾ. ಉಳಿದ ನಾಲ್ವರು ಅಸಮರ್ಥರು ಟೆನ್ಷನ್‌ನಲ್ಲಿಯೇ ಕೂಡುವಂತಾಯ್ತು. ಯಾಕೆಂದರೆ ಕಿಚ್ಚ ಮಾತನ್ನು ಬೇರೆ ಕಡೆಗೆ ಹೊರಳಿಸಿದರು.

ಮನೆಯೊಳಗಿನ ವಿದ್ಯಮಾನಗಳ ಕುರಿತು ಎಲ್ಲರ ಅಭಿಪ್ರಾಯಗಳನ್ನು ಪಡೆದುಕೊಂಡರು. ಮನೆಯೊಳಗೆ ಬಂದ ಲಾರ್ಡ್‌ ಪ್ರಥಮ್‌ ಅವರಿಗೆ ಪೂರ್ತಿಯಾಗಿ ಸೆರೆಂಡರ್ ಆದ ಬಗ್ಗೆ ಪ್ರಶ್ನಿಸಿದರು. ಬಿಗ್‌ಬಾಸ್‌ ಯಾವುದೇ ಸೂಚನೆಯನ್ನೂ ಕೊಡದೇ ನೀವೆಲ್ಲ ಯಾಕೆ ಅವರು ಹೇಳಿದ್ದನ್ನೆಲ್ಲ ಮಾಡಿದಿರಿ? ಅವರನ್ನು ಒಪ್ಪಿಕೊಂಡಿರಿ? ಎಂಬ ಕಿಚ್ಚನ ಪ್ರಶ್ನೆಗೆ ಯಾರ ಬಳಿಯೂ ಉತ್ತರ ಇರಲಿಲ್ಲ.
ಈ ಮನೆಯಲ್ಲಿ ಊಸರವಳ್ಳಿ ಯಾರು? ವಿಷಕಾರಿ ಯಾರು? ಡಿಪ್ಲೊಮೆಟಿಕ್ ಯಾರು? ಇನೋಸೆಂಟ್ ಯಾರು? ಎಂಬೆಲ್ಲ ಪ್ರಶ್ನೆಗಳು ಕಿಚ್ಚನ ಬಾಯಿಯಿಂದ ಬಂತು. ಅದಕ್ಕೆ ಗೌರೀಶ್, ತನಿಷಾ, ಸಂಗೀತಾ ಎಲ್ಲರೂ ಬೇರೆ ಬೇರೆ ವ್ಯಕ್ತಿಗಳ ಹೆಸರು ಹೇಳಿದರು. ಈ ಮಧ್ಯೆ ತನಿಷಾ ಮತ್ತು ಭಾಗ್ಯಶ್ರೀ ಅವರ ನಡುವೆ ಸಣ್ಣ ಕಿಡಿಯೂ ಹೊತ್ತಿಕೊಂಡಿತು.

ನಂತರ ಮಾತು ಡ್ರೋಣ್ ಪ್ರತಾಪ್ ಅವರ ಬಗ್ಗೆ ಹೊರಳಿತು. ಸುದೀಪ್ ಈ ಮಾತುಕತೆ ಶುರುಮಾಡಿದ್ದು ಒಂದು ಕಥೆಯ ಜೊತೆಗೆ. ‘ಒಬ್ಬ ತಪ್ಪಿತಸ್ಥ ತಪ್ಪು ಮಾಡಿದಾನೆ. ಭಗವಂತ ಅವನಿಗೆ ಶಿಕ್ಷೆ ಕೊಟ್ಟು ನಂತರ ಕ್ಷಮಿಸುತ್ತಾನೆ. ಆದರೆ ತಪ್ಪಿತಸ್ಥ ಹೊರಗೆ ಹೋದಮೇಲೆ ಸಮಾಜ ಅವನನ್ನು ಕಳ್ಳ ಸುಳ್ಳ ಎಂದೇ ಗುರ್ತಿಸುತ್ತದೆ. ಭಗವಂತ ಕ್ಷಮಿಸಿದವನ್ನು ಸಮಾಜ ದೂಷಿಸುತ್ತದೆ. ಅದೊಂದು ರೀತಿಯ ವ್ಯಕ್ತಿಯ ಕೊಲೆ.’ ಇದು ಕಥೆ. ಕಥೆ ಹೇಳಿಯಷ್ಟೇ ಅವರು ಸುಮ್ಮನಾಗಲಿಲ್ಲ.
‘ಈ ಕಥೆಯಲ್ಲಿ ಭಗವಂತ ಯಾರು? ತಪ್ಪಿತಸ್ಥ ಯಾರು? ಸಮಾಜ ಯಾರು?’ ಎಂಬ ಪ್ರಶ್ನೆ ಕಿಚ್ಚನ ಬಾಯಿಯಿಂದ ಹೊರಬೀಳುತ್ತಿದ್ದಂತೆಯೇ ಸ್ಪರ್ಧಿಗಳಿಗೆ ಅವರು ಯಾವುದರ ಬಗ್ಗೆ ಮಾತಾಡುತ್ತಿದ್ದಾರೆ ಎಂದು ತಿಳಿದುಬಿಟ್ಟಿತ್ತು.

ಕಿಚ್ಚ ಈ ಕಥೆಯನ್ನು ಹೇಳಿದ್ದು ಡ್ರೋಣ್ ಪ್ರತಾಪ್ ವಿಷಯಕ್ಕೆ. ಅವರ ಬಗ್ಗೆ ವಾರವಿಡೀ, ಸಮಯ ಸಿಕ್ಕಾಗೆಲ್ಲ, ಅವಕಾಶವಾದಾಗಲೆಲ್ಲ ಆಡಿಕೊಂಡು ನಗುತ್ತಿದ್ದ, ವ್ಯಂಗ್ಯ ಮಾಡುತ್ತಿದ್ದ ತುಕಾಲಿ ಸಂತೋಷ್ ಸುದೀಪ್ ಚೆನ್ನಾಗಿಯೇ ಕ್ಲಾಸ್ ತೆಗೆದುಕೊಂಡರು.
‘ಒಬ್ಬ ವ್ಯಕ್ತಿಯನ್ನು ಆಡಿಕೊಂಡು ಉಳಿದವರನ್ನು ನಗಿಸುವ ವ್ಯಕ್ತಿ, ಗುಡ್ ಜೋಕರ್ ಅಲ್ಲ, ಬ್ಯಾಟ್‌ಮನ್ ಜೋಕರ್!’ ಎಂದು ಎಚ್ಚರಿಸಿದರು ಕೂಡ.

‘ಪ್ರತಿಯೊಬ್ಬ ವ್ಯಕ್ತಿಯೊಳಗೂ ಅವನ ಸತ್ಯ ಅವನ ನೋವು ಅವನಲ್ಲಿ ಇರುತ್ತದೆ. ಅದನ್ನು ನಾವು ಒಪ್ಪಿಕೊಳ್ಳಬೇಕು ಅಂತೇನಿಲ್ಲ. ಆದರೆ ಕನಿಷ್ಠ ನಾವು ಮಾಡಬಹುದು ಸುಮ್ಮನಿರುವುದು. ತಪ್ಪು ಮಾಡಿದ ವ್ಯಕ್ತಿ ಶಿಕ್ಷ ಅನುಭವಿಸುತ್ತಾನೆ. ಆದರೆ ಆ ಶಿಕ್ಷೆ ನೀಡುವುದಕ್ಕೆ ನೀವ್ಯಾರು? ಇನ್ನೊಬ್ಬ ವ್ಯಕ್ತಿಯನ್ನು ತಮಾಷೆ ಮಾಡಿ ಬೇರೆಯವರನ್ನು ನಗಿಸುವುದು ಎಷ್ಟು ಸರಿ? ಒಬ್ಬ ವ್ಯಕ್ತಿಯ ಅಳು ಹೇಗೆ ನಗುವಾಗುತ್ತದೆ?’
-ಕಿಚ್ಚ ಒಂದರ ಹಿಂದೊಂದು ಪ್ರಶ್ನೆ ಕೇಳುತ್ತಿದ್ದ ಹಾಗೆಯೇ ತುಕಾಲಿ ಸಂತೋಷ್ ಮುಖದಲ್ಲಿ ಪಶ್ಚಾತ್ತಾಪ ಕಾಣಿಸಿಕೊಂಡಿತು. ಡ್ರೋಣ್ ಪ್ರತಾಪ್ ಕಣ್ಣುಗಳಲ್ಲಿ ನೀರು ತುಂಬಿಕೊಂಡಿತು. ತುಕಾಲಿ ಅವರು ಸುದೀಪ್ ಎದುರಿನಲ್ಲಿಯೇ ಪ್ರತಾಪ್‌ಗೆ ಕ್ಷಮೆಯನ್ನೂ ಕೇಳಿದರು.

ಕೊನೆಯಲ್ಲಿ, ‘ಒಳ್ಳೆಯ ರೀತಿಯಿಂದಲೇ ಎಲ್ಲರನ್ನೂ ನಗಿಸಬಹುದು. ಅದನ್ನು ನೀವು ಚೆನ್ನಾಗಿಯೇ ಮಾಡುತ್ತೀರಿ. ಅದನ್ನು ಮುಂದುವರಿಸಿ. ಆದರೆ ಇನ್ನೊಬ್ಬ ವ್ಯಕ್ತಿಯನ್ನು ಎದುರಿಟ್ಟುಕೊಂಡು, ಅವರನ್ನು ತಮಾಷೆ ಮಾಡಿಕೊಂಡು ಉಳಿದ ಹತ್ತು ವ್ಯಕ್ತಿಗಳನ್ನು ನಗಿಸುವುದರಲ್ಲಿ ಯಾವ ದೊಡ್ಡತನವೂ ಇಲ್ಲ’ ಎಂಬ ಹಿತವಚನವನ್ನೂ ಹೇಳಿದರು. ನಂತರ ಪ್ರತಾಪ್‌ ಅವರಿಗೆ ಮಾತನಾಡಲು ಅವಕಾಶ ಕೊಟ್ಟರು.
‘ಮೊದಲ ದಿನ ಬಂದಾಗ ನನ್ನ ಮನಸಲ್ಲಿ ಏನೂ ಇರಲಿಲ್ಲ. ಆದರೆ ಎಲ್ಲರೂ ಒಟ್ಟಿಗೇ ಸೇರಿದಾಗ ನನ್ನನ್ನು ನಾನು ನಿರೂಪಿಸಿಕೊಳ್ಳಬೇಕು ಎಂದು ಅನಿಸಿತು’ ಎಂದರು ಪ್ರತಾಪ್.
‘ನಮ್ಮ ತಪ್ಪುಗಳು ನಮಗೆ ಮಾತ್ರ ಗೊತ್ತಿರುತ್ತದೆ. ನಿಮ್ಮ ಒಳಗಡೆ ಒಂದು ಕಾನ್ಪ್ಲಿಕ್ಟ್ ಇರಬಹುದು ಅದನ್ನು ಸರಿಯಾಗಿ ಫೇಸ್ ಮಾಡಿ. ಆ ಧೈರ್ಯ ನಿಮಗೆ ಸಿಗಲಿ. ಅದು ನಿಮಗೆ ಬಿಗ್‌ಬಾಸ್ ಮನೆಯೊಳಗೆ ಸಿಗಲಿ’ ಎಂದು ಕಿಚ್ಚ, ಪ್ರತಾಪ್‌ಗೆ ಕಿವಿಮಾತು ಹೇಳಿದರು.

ಸಮರ್ಥರು-ಅಸಮರ್ಥರ ಗುಂಪಿನಿಂದ ಇನ್ನೂ ನಾಮಿನೇಷನ್‌ ಪಟ್ಟಿಯಲ್ಲಿ ಇದ್ದವರು ಮೈಕಲ್, ಕಾರ್ತಿಕ್ ಸಿರಿ, ನೀತು, ಪ್ರತಾಪ್ ಮತ್ತು ಶ್ಯಾಮ್ ಇವರಿಷ್ಟು ಸ್ಪರ್ಧಿಗಳು. ಇವರಲ್ಲಿ ಯಾರು ಮೊದಲು ಸೇಫ್‌ ಆಗಬೇಕು ಎಂಬ ಕಿಚ್ಚನ ಪ್ರಶ್ನೆಗೆ ಸ್ಪರ್ಧಿಗಳು ಉತ್ತರಿಸಿದರು. ಹಲವರು ಪ್ರತಾಪ್ ಸೇಫ್ ಆಗಬೇಕು ಎಂದು ಆಶಿಸಿದರು. ಆದರೆ ಜನರ ನಿರ್ಧಾರ ಬೇರೆಯೇ ಆಗಿತ್ತು.

ಆಗ ಕಿಚ್ಚ ಈ ಎಪಿಸೋಡ್‌ನಲ್ಲಿ ಸೇವ್ ಆಗುತ್ತಿರುವ ಇನ್ನೊಬ್ಬ ಸ್ಪರ್ಧಿಯನ್ನೂ ಘೋಷಿಸಿದರು. ಅವರು ಸೇಫ್ ಮಾಡಿದ್ದು ಕಾರ್ತೀಕ್ ಅವರನ್ನು. “ಮೈಕಲ್, ಸಿರಿ, ನೀತು, ಪ್ರತಾಪ್ ಮತ್ತು ಶ್ಯಾಮ್ ಇವರಲ್ಲಿ ಯಾರೆಲ್ಲ ಸೇಫ್‌? ಯಾರು ಮನೆಯಿಂದ ಹೊರಬೀಳುತ್ತಾರೆ? ಎನ್ನುವುದನ್ನು ನೋಡಲು ನಾಳೆಯ ಸಂಚಿಕೆಯವರೆಗೆ ಕಾಯಿರಿ. ಎಪಿಸೋಡ್ ನೋಡಕ್ಕಾಗ್ದೆ ಇರೋದು JioCinema ಆಪ್‌ನಲ್ಲಿ ಫ್ರೀಯಾಗಿ ನೋಡಿ, 24 ಗಂಟೆ ನೇರಪ್ರಸಾರವನ್ನೂ ನೋಡಿ’ ಎಂದು ಹೇಳಿ ಕಿಚ್ಚ, ಬಿಗ್‌ಬಾಸ್‌ ಕನ್ನಡ ಸೀಸನ್ 10 ಮೊದಲ ಶನಿವಾರದ ಎಪಿಸೋಡ್ ಮುಗಿಸಿದರು. ಆದರೆ ಇದು ಅಲ್ಪವಿರಾಮವಷ್ಟೆ. ಭಾನುವಾರದ ಎಪಿಸೋಡ್‌ ಇನ್ನಷ್ಟು ರೋಚಕವಾಗಿರಲಿದೆ ಎಂಬುದರ ಸೂಚನೆಯಂತೂ ಈ ಎಪಿಸೋಡ್‌ನಲ್ಲಿಯೇ ಕಾಣಿಸಿಕೊಂಡಿದೆ.

https://www.jiocinema.com/videos/first-panchayati-with-kichcha-sudeep/3831325

ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಿ.
ಶನಿವಾರ-ಭಾನುವಾರದ ವೀಕೆಂಡ್‌ ಎಪಿಸೋಡ್‌ಗಳನ್ನು Colors Kannada ವಾಹಿನಿಯಲ್ಲಿ ರಾತ್ರಿ 9 ಗಂಟೆಗೆ ವೀಕ್ಷಿಸಿ.
#BiggBossKannada #BBK10 #KichchaSudeep #BBK10onJioCinema #BBKOnJioCinema #ColorsKannada

Tags: Bigg Boss Kannadabigg boss kannada 10bigg boss kannada contestantsbigg boss kannada season 10bigg boss kannada season 10 contestantsbigg boss kannada season 10 contestants list with photosbigg boss kannada season 10 housebigg boss kannada season 10 starting datebigg boss kannada season 10 updatebigg boss kannada season 8bigg boss season 10colors kannadacolors kannada bigg bosscolors kannada bigg boss season 10Kannadakannada series
ShareTweetSendShare
Join us on:

Related Posts

devara-maneyalli-deeparadhane-yene-yene-phala

ದೀಪಾರಾಧನೆಯ ರಹಸ್ಯ: ಯಾವ ಎಣ್ಣೆ, ಎಷ್ಟು ಬತ್ತಿ ಹಚ್ಚಿದರೆ ಏನು ಫಲ?

by admin
August 6, 2026
0

1"ಇಪ್ಪೆ ಎಣ್ಣೆ"ಯು ದೇವರಿಗೆ ತುಂಬಾ ತುಂಬಾ ಶ್ರೇಷ್ಠ.. ಇದರಿಂದ ಮನೆಯಲ್ಲಿ ದುಃಖ, ದಾರಿದ್ರ್ಯ, ಬಡತನ, ಧನದರಿದ್ರ , ಅನ್ನದರಿದ್ರ, ನಿತ್ಯದರಿದ್ರ, ಹಾಗೂ ಸಾಲದ ಭಾದೆ ನಿವಾರಣೆಯಾಗುತ್ತದೆ .....

hd-kumaraswamy-honours-para-athlete-shilpa-k-shaila-commonwealth-games-bronze-medalist

ಕಾಮನ್‌ವೆಲ್ತ್ ಗೇಮ್ಸ್‌ ; ಪ್ಯಾರಾ ಅಥ್ಲೀಟ್ ಶಿಲ್ಪಾ ಅವರನ್ನು ಗೌರವಿಸಿದ ಹೆಚ್.ಡಿ.ಕುಮಾರಸ್ವಾಮಿ

by admin
August 6, 2026
0

ಕಾಮನ್‌ವೆಲ್ತ್ ಗೇಮ್ಸ್‌ ; ಪ್ಯಾರಾ ಅಥ್ಲೀಟ್ ಶಿಲ್ಪಾ ಅವರನ್ನು ಗೌರವಿಸಿದ ಹೆಚ್.ಡಿ.ಕುಮಾರಸ್ವಾಮಿ ನವದೆಹಲಿಯ ಸಚಿವರ ನಿವಾಸದಲ್ಲಿ ಭೇಟಿ; ನಿಮ್ಮ ಸಾಧನೆ ಪ್ರೇರಣಾದಾಯಕ ಎಂದ ಕೇಂದ್ರ ಸಚಿವರು ಶಿಲ್ಪಾ...

ಬಿಜೆಪಿಯ ದುರಹಂಕಾರಕ್ಕೆ ಬಿಹಾರದ ಜನತೆಯಿಂದ ತಕ್ಕ ಉತ್ತರ :ಬಿಜೆಪಿಯ 30 ವರ್ಷಗಳ ಭದ್ರಕೋಟೆ ಧೂಳಿಪಟ- ಮೂರನೇ ಶಕ್ತಿಯಾಗಿ ಹೊರಹೊಮ್ಮಿದ ಪ್ರಶಾಂತ್ ಕಿಶೋರ್

ಬಿಜೆಪಿಯ ದುರಹಂಕಾರಕ್ಕೆ ಬಿಹಾರದ ಜನತೆಯಿಂದ ತಕ್ಕ ಉತ್ತರ :ಬಿಜೆಪಿಯ 30 ವರ್ಷಗಳ ಭದ್ರಕೋಟೆ ಧೂಳಿಪಟ- ಮೂರನೇ ಶಕ್ತಿಯಾಗಿ ಹೊರಹೊಮ್ಮಿದ ಪ್ರಶಾಂತ್ ಕಿಶೋರ್

by Shwetha
August 6, 2026
0

ಭಾರತೀಯ ರಾಜಕಾರಣದ ತೆರೆಮರೆಯ ಚಾಣಕ್ಯ ಎಂದೇ ಖ್ಯಾತರಾಗಿರುವ ಪ್ರಶಾಂತ್ ಕಿಶೋರ್ (ಪಿಕೆ), ಈಗ ನೇರ ಚುನಾವಣಾ ಕಣದಲ್ಲೂ ತಮ್ಮ ಚಮತ್ಕಾರ ತೋರಿದ್ದಾರೆ. ಬಿಹಾರದ ಅತ್ಯಂತ ಪ್ರತಿಷ್ಠಿತ ಹಾಗೂ...

ಸಚಿವ ಸ್ಥಾನ ಸಿಗದ ಅಸಮಾಧಾನ; ಶಾಸಕರ ಜೊತೆ ಸಿಎಂ, ಕೆಪಿಸಿಸಿ ಅಧ್ಯಕ್ಷರ ಮಾತುಕತೆ

ಸಚಿವ ಸ್ಥಾನ ಸಿಗದ ಅಸಮಾಧಾನ; ಶಾಸಕರ ಜೊತೆ ಸಿಎಂ, ಕೆಪಿಸಿಸಿ ಅಧ್ಯಕ್ಷರ ಮಾತುಕತೆ

by Shwetha
August 6, 2026
0

ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಬಳಿಕ ಕಾಂಗ್ರೆಸ್‌ನಲ್ಲಿ ಅಸಮಾಧಾನ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕೆಪಿಸಿಸಿ ಅಧ್ಯಕ್ಷರು ಅಸಮಾಧಾನಗೊಂಡಿರುವ ಶಾಸಕರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಸಚಿವ...

ಸಚಿವ ಬಿ. ನಾಗೇಂದ್ರಗೆ ಶಾಕ್; ದೆಹಲಿ ಪ್ರವಾಸಕ್ಕೆ ಅನುಮತಿ ನಿರಾಕರಣೆ

ಸಚಿವ ಬಿ. ನಾಗೇಂದ್ರಗೆ ಶಾಕ್; ದೆಹಲಿ ಪ್ರವಾಸಕ್ಕೆ ಅನುಮತಿ ನಿರಾಕರಣೆ

by Shwetha
August 6, 2026
0

ವಾಲ್ಮೀಕಿ ನಿಗಮ ಹಗರಣ ಪ್ರಕರಣದಲ್ಲಿ ಆರೋಪಿಯಾಗಿರುವ ಸಚಿವ ಬಿ. ನಾಗೇಂದ್ರ ಅವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹಿನ್ನಡೆ ನೀಡಿದೆ. ಜುಲೈ 27ರಿಂದ ಆಗಸ್ಟ್ 10ರವರೆಗೆ ದೆಹಲಿಗೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram