ಬೆಂಗಳೂರು : ರಾಜ್ಯದಲ್ಲಿ ಕ್ವಾರಂಟೈನ್ ನಿಯಮವನ್ನು ಮತ್ತೆ ಬದಲಾವಣೆ ಮಾಡಲಾಗಿದೆ. ಕಳೆದ ಕೆಲ ದಿನಗಳ ಹಿಂದೆ ರಾಜ್ಯದಲ್ಲಿ ಕ್ವಾರಂಟೈನ್ ನಿಯಮ ಬದಲಾವಣೆ ಮಾಡಲಾಗಿತ್ತು. ಬದಲಾದ ನಿಯಮಗಳ ಪ್ರಕಾರ ಮಹರಾಷ್ಟ್ರದಿಂದ ಬಂದವರು 7 ದಿನಗಳ ಕಾಲ ಸಾಂಸ್ಥಿಕ ಕ್ವಾರಂಟೈನ್ 7 ದಿನ ಹೋಮ್ ಕ್ವಾರಂಟೈನ್ ಮಾಡಬೇಕು. ಇದೆ ಮಾದರಿಯಲ್ಲಿ ತಮಿಳುನಾಡನಿಂದ ಬಂದವರಿಗೂ ಅನ್ವಯವಾಗಿತ್ತು. ಅಲ್ಲದೆ ದೆಹಲಿ ಮತ್ತು ಬೇರೆ ರಾಜ್ಯಗಳಿಂದ ಬಂದವರು 3 ದಿನ ಕ್ವಾರಂಟೈನ್ ಮಾಡುವಂತೆ ಹೇಳಲಾಗಿತ್ತು.
ಇದೀಗ ಕೊರೊನಾ ಅಟ್ಟಹಾಸ ಹೆಚ್ಚಾಗಿರುವ ಕಾರಣಕ್ಕೆ ಮತ್ತೆ ಕ್ವಾರಂಟೈನ್ ನಿಯಮ ಬದಲಾವಣೆ ಮಾಡಲಾಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ರಾಜ್ಯದಲ್ಲಿ ಕೊರೊನಾ ಸೋಂಕಿತರ ಗುಣಮುಖರ ಪ್ರಮಾಣ 61.39%ರಷ್ಟು ಇದೆ. ಸಾವಿನ ಪ್ರಮಾಣ 1.49% ರಷ್ಟಿದೆ. ಕೊರೊನಾ ಸೋಂಕಿತರ ಮೇಲೆ ನಿಗ ಇಡಲಾಗಿದೆ. ಅಲ್ಲದೆ ಬೇರೆ ರಾಜ್ಯಗಳಿಂದ ಬರುವವರು 14 ದಿನಗಳ ಕ್ವಾರಂಟೈನ್ ನಲ್ಲಿರು ಬೇಕು ಎಂದು ಟ್ವೀಟ್ ಮಾಡುವ ಮೂಲಕ ಸೂಚನೆ ನೀಡಿದ್ದಾರೆ.








