ಬೆಂಗಳೂರು: ಗುಜರಿ ಅಂಗಡಿ ನಡೆಸುತ್ತಿದ್ದ ವ್ಯಕ್ತಿ ಸಾವನ್ನಪ್ಪಿದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಪುಲಕೇಶಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಪಘಾತ ಪ್ರಕರಣವನ್ನೇ ಸದ್ಯ ಪೊಲೀಸರು ಬೇಧಿಸಿದ್ದಾರೆ. ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಅಪಘಾತದ ಮೂಲಕ ಕೊಲೆ (Murder) ಯಾಗಿರುವ ವಿಚಾರ ಬೆಳಕಿಗೆ ಬಂದಿದೆ.
ಗುಜರಿ ಅಂಗಡಿ ವ್ಯವಹಾರ ನಡೆಸುತಿದ್ದ ಅಸ್ಗರ್ ಮೇಲೆ ತಡರಾತ್ರಿ ನಾಲ್ವರು ದಾಳಿ ನಡೆಸಿ ಮಚ್ಚು ಲಾಂಗುಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಅಲ್ಲದೆ, ಇದು ಅಪಘಾತ ಎಂದು ಬಿಂಬಿಸಲು ಯತ್ನಿಸಿದ್ದಾರೆ. ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ.
ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಮಾಡುತ್ತಿದ್ದ ಅಸ್ಗರ್ ಹಾಗೂ ಆರೋಪಿಗಳ ನಡುವೆ ಕಳೆದ ಹಲವಾರು ದಿನಗಳಿಂದ ಪರಿಚಯವಿತ್ತು. ಆರೋಪಿಗಳು ಆತನ ಬಳಿ ಕಾರು ಖರೀದಿಸಿದ್ದರು. ಈ ಸಂದರ್ಭದಲ್ಲಿ ನಾಲ್ಕು ಲಕ್ಷ ಹಣದ ವಿಚಾರಕ್ಕೆ ಪ್ರಮುಖ ಹಾಗೂ ಅಸ್ಗರ್ ಮಧ್ಯೆ ಜಗಳವಿತ್ತು. ಹೀಗಾಗಿಯೇ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.