ವಿಜಯಪುರ: ನಿನ್ನೆಯಷ್ಟೇ ಕೊರೊನಾ ಸೊಂಕು ದೃಢಪಟ್ಟಿದ್ದ ಗರ್ಭಿಣಿ ಇಂದು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ವಿಜಯಪುರ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ವೈದ್ಯರು ಗರ್ಭಿಣಿಗೆ ಸಹಜ ಹೆರಿಗೆ ಮಾಡಿಸಿದ್ದಾರೆ.
ನಿನ್ನೆಯಷ್ಟೆ ಗರ್ಭಿಣಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಗರ್ಭಿಣಿಯನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು. ಇಂದು ಬೆಳಗ್ಗೆ ಏಕಾಏಕಿ ಹೆರಿಗೆ ನೋವು ಕಾಣಿಸಿಕೊಂಡಿದೆ. ಕೂಡಲೆ ವೈದ್ಯರು ಸುರಕ್ಷತಾ ಕ್ರಮ ಕೈಗೊಂಡು ಗರ್ಭಿಣಿಗೆ ಹೆರಿಗೆ ಮಾಡಿಸಿದ್ದಾರೆ.
ಎರಡು ನವಜಾತ ಶಿಶುಗಳು ಹಾಗೂ ತಾಯಿ ಆರೋಗ್ಯದಿಂದ ಇದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಗರ್ಭಿಣಿ ಅನೀಮಿಯಾ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ತಪಾಸಣೆ ನಡೆಸಿದಾಗ ಕೊರೊನಾ ಪಾಸಿಟಿವ್ ಕಂಡು ಬಂದಿತ್ತು.
ದುಷ್ಟ ಗ್ರಹಗಳನ್ನು ತೊಡೆದುಹಾಕಲು ಹನುಮಾನ್ ಮಂತ್ರ
ದುಷ್ಟ ಗ್ರಹಗಳಿಂದ ನಿಮ್ಮ ಜೀವನದಲ್ಲಿ ಎಂದಿಗೂ ದುಃಖ ಇರುವುದಿಲ್ಲ. ಹನುಮಂತನ ಈ ತಾರಕ ಮಂತ್ರವನ್ನು ಒಮ್ಮೆ ಪಠಿಸಿದರೂ ಸಹ ಗ್ರಹಗಳು ನಿಮ್ಮ ಕಣ್ಣುಗಳನ್ನು ಮುಚ್ಚಿ ನಿಮ್ಮ ಕುಟುಂಬಕ್ಕೆ...








