ರಜನೀಕಾಂತ್ (Rajinikanth) ನಟನೆಯ ‘ಜೈಲರ್’ ಚಿತ್ರದಲ್ಲಿ ವಿಲನ್ ಆಗಿ ನಟಿಸಿದ್ದ ವಿನಾಯಗನ್ ಅವರು ಕುಡಿದ ಮತ್ತಿನಲ್ಲಿ ದುರ್ವರ್ತನೆ ತೋರಿಸಿ ಪೊಲೀಸರ ಅತಿಥಿಯಾಗಿದ್ದಾರೆ.
ಕುಡಿದ ಮತ್ತನಲ್ಲಿ ಠಾಣೆಗೆ ಬಂದಿದ್ದಲ್ಲದೇ, ದುರ್ವರ್ತನೆ ತೋರಿರುವ ವಿನಾಯಗನ್ ಅನ್ನು ಕೇರಳದ ಉತ್ತರ ಎರ್ನಾಕುಲಂ ಪೊಲೀಸರು ಬಂಧಿಸಿದ್ದಾರೆ.
ಎರ್ನಾಕುಲಂ ಪೊಲೀಸ್ ಠಾಣೆಯಲ್ಲಿ ವಿನಾಯಕನ್ ವಿರುದ್ಧ ದೂರು ದಾಖಲಾಗಿತ್ತು. ವಿನಾಯಗನ್ ವಾಸವಿರುವ ಅಪಾರ್ಟ್ಮೆಂಟ್ನವರು ಅತಿಯಾದ ಶಬ್ದ, ಲೇಟ್ ನೈಟ್ ಪಾರ್ಟಿಗಳು ಮಾಡುತ್ತಿದ್ದ ಹಿನ್ನೆಲೆಯಲ್ಲಿ ದೂರು ದಾಖಲಿಸಿದ್ದರು. ಹೀಗಾಗಿ ಪೊಲೀಸರು ನೋಟಿಸ್ ನೀಡಿದ್ದರು.
ಆದರೆ, ಕುಡಿದ ಮತ್ತಿನಲ್ಲಿ ಪೊಲೀಸ್ ಠಾಣೆ ಪ್ರವೇಶಿಸಿದ ನಟ ವಿನಾಯಗನ್, ಠಾಣೆಯಲ್ಲಿ ಕೆಟ್ಟದಾಗಿ ವರ್ತಿಸಿದ್ದಾರೆ ಎನ್ನಲಾಗಿದೆ. ಪೊಲೀಸ್ ಠಾಣೆಯ ಅಧಿಕಾರಿಗಳನ್ನು ಏಕವಚನದಲ್ಲಿ ಮಾತನಾಡಿದ್ದು ಮಾತ್ರವೇ ಅಲ್ಲದೆ ಅವಾಚ್ಯ ಶಬ್ದಗಳಿಂದಲೂ ನಿಂದಿಸಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ.