ADVERTISEMENT
Friday, October 9, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ವಿನಯ್‌-ಕಾರ್ತಿಕ್‌ಗೆ ಥಂಡಾಪಾನಿ ಶಿಕ್ಷೆ!

Vinay-Karthik sentenced to Thandapani!

admin by admin
October 27, 2023
in Cinema, Newsbeat, ಮನರಂಜನೆ
Share on FacebookShare on TwitterShare on WhatsappShare on Telegram

ವಿನಯ್‌-ಕಾರ್ತಿಕ್‌ಗೆ ಥಂಡಾಪಾನಿ ಶಿಕ್ಷೆ!

Vinay-Karthik sentenced to Thandapani!

Related posts

ಕುಮಾರಸ್ವಾಮಿ ಮೊದಲು ತಮ್ಮ ರಾಜೀನಾಮೆಯ ಅಸಲಿ ಕಥೆ ಬಿಚ್ಚಿಡಲಿ: ನಿಮ್ಮ ಕುಟುಂಬ ನೈಸ್ ನಲ್ಲಿ ಎಷ್ಟು ಭೂಮಿ ಕಬಳಿಸಿದೆ? ಸೋಮಶೇಖರ್ ವಾಗ್ದಾಳಿ

ಕುಮಾರಸ್ವಾಮಿ ಮೊದಲು ತಮ್ಮ ರಾಜೀನಾಮೆಯ ಅಸಲಿ ಕಥೆ ಬಿಚ್ಚಿಡಲಿ: ನಿಮ್ಮ ಕುಟುಂಬ ನೈಸ್ ನಲ್ಲಿ ಎಷ್ಟು ಭೂಮಿ ಕಬಳಿಸಿದೆ? ಸೋಮಶೇಖರ್ ವಾಗ್ದಾಳಿ

October 9, 2026
ಮೇವು, ನೀರಿಲ್ಲದೆ ಜಾನುವಾರುಗಳ ಮಾರಾಟಕ್ಕೆ ರೈತರ ಅನಿವಾರ್ಯತೆ: ಬರದ ಕರಾಳ ಚಿತ್ರಣ

ಮೇವು, ನೀರಿಲ್ಲದೆ ಜಾನುವಾರುಗಳ ಮಾರಾಟಕ್ಕೆ ರೈತರ ಅನಿವಾರ್ಯತೆ: ಬರದ ಕರಾಳ ಚಿತ್ರಣ

October 9, 2026

ಬಿಗ್‌ಬಾಸ್‌ ಮನೆ ಅಂದಮೇಲೆ ಎಲ್ಲದಕ್ಕೂ ನೀತಿ-ನಿಯಮಗಳು ಇದ್ದೇ ಇರತ್ತೆ. ಅದನ್ನು ಮೀರಿದವರಿಗೆ ಶಿಕ್ಷೆಯೂ ಅಷ್ಟೇ ಖಚಿತವಾಗಿ ಸಿಗುತ್ತದೆ. ಇಂದಿನ ಬಿಗ್‌ಬಾಸ್‌ ಮನೆಯ ಬೆಳಗು ಅಂಥದ್ದೊಂದು ಶಿಕ್ಷೆಗೆ ಸಾಕ್ಷಿಯಾಗಿದೆ. ಅಂದಹಾಗೆ ಶಿಕ್ಷೆಗೆ ಗುರಿಯಾದವರು ಯಾರು ಗೊತ್ತೆ?
ವಿನಯ್ ಮತ್ತು ಕಾರ್ತಿಕ್!

ವಿನಯ್‌ ಮತ್ತು ಕಾರ್ತಿಕ್ ಮೊದಲಿನಿಂದಲೂ ತಮ್ಮ ಸ್ನೇಹಸಂಬಂಧವನ್ನು ಉಳಿಸಿಕೊಂಡು ಬಂದವರು. ಪರಸ್ಪರ ವಿರುದ್ಧ ತಂಡಗಳಲ್ಲಿ ಆಡುವಾಗಲೂ, ಜಿದ್ದಾಜಿದ್ದಿನ ಸ್ಪರ್ಧೆ ಇದ್ದಾಗಲೂ, ಟಾಸ್ಕ್‌ ಕಾರಣಕ್ಕೆ ಮನೆಯೊಳಗೆ ಪರಸ್ಪರ ಮಾತಿಗೆ ಮಾತು ಬೆಳೆದಾಗಲೂ ಇವರಿಬ್ಬರೂ ನಂತರ ಅದನ್ನು ಮರೆತು ಒಂದಾಗಿದ್ದರು. ಭುಜಕ್ಕೆ ಭುಜ ಢೀ ಹೊಡೆದು ನಕ್ಕಿದ್ದರು.
ಇದೀಗ ಈ ಸ್ನೇಹದ ಜೋಡಿ ಜೊತೆಜೊತೆಯಲ್ಲಿಯೇ ಶಿಕ್ಷೆ ಅನುಭವಿಸುವ ಸಂದರ್ಭವೂ ಬಂದಿದೆ. JioCinema ಬಿಡುಗಡೆ ಮಾಡಿರುವ ಇಂದಿನ ಬೆಳಗಿನ ಪ್ರೋಮೊದಲ್ಲಿ ಇದು ಸೆರೆಯಾಗಿದೆ.
ಆಗಿದ್ದು ಇಷ್ಟೆ!

ಬೆಳಿಗ್ಗೆ ಎದ್ದಾಗ ಸ್ಪರ್ಧಿಗಳಿಗೆ ಬಿಗ್‌ಬಾಸ್‌ ಧ್ವನಿ ಕೇಳಿಸಿದೆ. ಆ ಧ್ವನಿ ಯಾವುದೋ ಸೂಚನೆ ನೀಡುವುದಕ್ಕಾಗಲಿ, ಶುಭಾಶಯ ಕೋರುವುದಕ್ಕಾಗಿ, ಅಥವಾ ಟಾಸ್ಕ್‌ ನೀಡುವುದಕ್ಕಾಗಲಿ ಬಂದಿದ್ದಲ್ಲ. ಬದಲಿಗೆ ಶಿಕ್ಷೆ ನೀಡುವುದಕ್ಕೆ!

‘ವಿನಯ್‌ ಹಾಗೂ ಕಾರ್ತಿಕ್ ಇಬ್ಬರೂ ರಾತ್ರಿ ಲೈಟ್‌ ಆಫ್ ಆಗುವ ಮೊದಲೇ ಮಲಗಿದ್ದರು. ಇನ್ನೂ ಮನೆಯ ಮಹತ್ವಗಳನ್ನು ಅರಿಯದೇ ಬದುಕುತ್ತಿರುವ ವಿನಯ್ ಹಾಗೂ ಕಾರ್ತಿಕ್ ಅವರಿಗೆ ಶಿಕ್ಷೆ ವಿಧಿಸಲಾಗುತ್ತಿದೆ’ -ಬಿಗ್‌ಬಾಸ್‌ ಧ್ವನಿ ಹೀಗೆ ಹೇಳುತ್ತಿರುವ ಹಾಗೆಯೇ ಮನೆಯವರೆಲ್ಲರೂ ಅಚ್ಚರಿಗೊಂಡಿದ್ದಾರೆ.

ಬಿಗ್‌ಬಾಸ್‌ ವಿಧಿಸಿದ ಶಿಕ್ಷೆಯೂ ಅಷ್ಟೇ ಪ್ರಖರವಾಗಿತ್ತು. ವಿನಯ್‌ ಮತ್ತು ಕಾರ್ತಿಕ್ ಅವರನ್ನು ಗಾರ್ಡನ್‌ ಏರಿಯಾದಲ್ಲಿ ಕುರ್ಚಿಯಲ್ಲಿ ಕೂಡಿಸಿ, ಮನೆಯವರೆಲ್ಲರೂ ಅವರ ಮುಖದ ಮೇಲೆ ತಣ್ಣೀರು ಎರಚಿ, ‘ಎದ್ದೇಳಿ ವಿನಯ್, ಎದ್ದೇಳಿ ಕಾರ್ತಿಕ್’ ಎಂದು ಹೇಳಿದ್ದಾರೆ. ಬೆಳಗಿನ ಚಳಿಯಲ್ಲಿ ಮೊದಲೇ ಮುದುರಿದ್ದ ವಿನಯ್ ಮತ್ತು ಕಾರ್ತಿಕ್ ತಣ್ಣೀರ ಸ್ನಾನದಿಂದ ಗಡಗಡ ನಡುಗಿಹೋಗಿದ್ದಾರೆ.

ಶಿಕ್ಷೆ ಮುಗಿದ ಮೇಲೆ ಕಾರ್ತಿಕ್ ಅವರ ಒದ್ದೆ ತಲೆಯನ್ನು ಸಂಗೀತಾ ತಮ್ಮ ಕೈಯಾರೆ ಒರೆಸಿಕೊಟ್ಟಿದ್ದು ಇನ್ನೊಂದು ವಿಶೇಷ. ಶಿಕ್ಷೆಯನ್ನು ಅನುಭವಿಸಿದ ಮೇಲೂ ನಗುನಗುತ್ತಲೇ ಭುಜಕ್ಕೆ ಭುಜ ಢೀ ಹೊಡೆದು ‘ಶಿಕ್ಷೆ ಆಗಿದೆ’ ಎಂದು ಗಹಗಹಿಸಿ ನಕ್ಕಿದ್ದಾರೆ. ಸಂಗೀತಾ ‘ನಿಮಗೆ ನಾಚಕೆ ಆಗಲ್ವಾ?’ ಎಂದು ಕೇಳಿದ್ದಾರೆ. ಅಲ್ಲದೆ, ‘ಇನ್ನಾದ್ರೂ ಎದ್ದೇಳಿ ಕಾರ್ತಿಕ್’ ಎಂದು ಎಚ್ಚರಿಸಿದ್ದಾರೆ. ಕಾರ್ತಿಕ್ ಮಾತ್ರ, ‘ಪ್ರೀತಿ ತೋರಿಸ್ತೀಯಾ ಸರಿ… ಹಂಗಾ ತೋರಿಸೋದು?’ ಎಂದು ಸಂಗೀತಾಳನ್ನು ಹುಸಿಮುನಿಸಿನಿಂದಲೇ ಪ್ರಶ್ನಿಸಿದ್ದಾರೆ.
ಇಂದಿನ ಬೆಳಿಗ್ಗೆಯೇ ತಣ್ಣೀರ ಅಭಿಷೇಕದಿಂದ ಶುರುವಾಗಿದೆ. ಮುಂದೆ ಬಿಸಿನೀರ ಹೊಗೆಯೂ ಆಡಲಿದೆಯೇ ಎಂಬ ಪ್ರಶ್ನೆಯೊಂದು ಪ್ರೇಕ್ಷಕರ ಮನಸಲ್ಲಿ ಮೂಡಿದೆ.

ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಿ.
ದೈನಂದಿನ ಎಪಿಸೋಡ್‌ಗಳನ್ನು Colors Kannada ದಲ್ಲಿ ಪ್ರತಿದಿನ ರಾತ್ರಿ 9.30ಕ್ಕೆ ವೀಕ್ಷಿಸಿ.

#BiggBossKannada #BBK10 #KichchaSudeep #BBK10onJioCinema #BBKOnJioCinema #ColorsKannada

Tags: bbk 10bbk 10 kannadabbk 10 kannada contestantsbbk 10 kannada updatebbk 10 trollbig boss kannada season 10bigg boss 10 contestantsbigg boss 10 contestants listbigg boss kannada 10bigg boss kannada season 10bigg boss kannada season 10 contestantsbigg boss kannada season 10 updatebigg boss season 10biggboss kannada season 10colors kannada bigg boss season 10drone prathap in bigg boss 10ಬಿಗ್ಬಾಸ್ ಸೀಸನ್ 10 ಸ್ಪರ್ಧಿಗಳು
ShareTweetSendShare
Join us on:

Related Posts

ಕುಮಾರಸ್ವಾಮಿ ಮೊದಲು ತಮ್ಮ ರಾಜೀನಾಮೆಯ ಅಸಲಿ ಕಥೆ ಬಿಚ್ಚಿಡಲಿ: ನಿಮ್ಮ ಕುಟುಂಬ ನೈಸ್ ನಲ್ಲಿ ಎಷ್ಟು ಭೂಮಿ ಕಬಳಿಸಿದೆ? ಸೋಮಶೇಖರ್ ವಾಗ್ದಾಳಿ

ಕುಮಾರಸ್ವಾಮಿ ಮೊದಲು ತಮ್ಮ ರಾಜೀನಾಮೆಯ ಅಸಲಿ ಕಥೆ ಬಿಚ್ಚಿಡಲಿ: ನಿಮ್ಮ ಕುಟುಂಬ ನೈಸ್ ನಲ್ಲಿ ಎಷ್ಟು ಭೂಮಿ ಕಬಳಿಸಿದೆ? ಸೋಮಶೇಖರ್ ವಾಗ್ದಾಳಿ

by Shwetha
October 9, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಈಗ ರಾಜೀನಾಮೆ ಮತ್ತು ಸ್ಟಿಂಗ್ ಆಪರೇಷನ್ ಗಳ ಮಹಾ ಸಮರ ಶುರುವಾಗಿದೆ. ಸಿದ್ದರಾಮಯ್ಯ ಅವರನ್ನು ಸ್ಟಿಂಗ್ ಆಪರೇಷನ್ ಮೂಲಕ ಸಿಎಂ ಸ್ಥಾನದಿಂದ ಕೆಳಗಿಳಿಸಲಾಗಿದೆ...

ಮೇವು, ನೀರಿಲ್ಲದೆ ಜಾನುವಾರುಗಳ ಮಾರಾಟಕ್ಕೆ ರೈತರ ಅನಿವಾರ್ಯತೆ: ಬರದ ಕರಾಳ ಚಿತ್ರಣ

ಮೇವು, ನೀರಿಲ್ಲದೆ ಜಾನುವಾರುಗಳ ಮಾರಾಟಕ್ಕೆ ರೈತರ ಅನಿವಾರ್ಯತೆ: ಬರದ ಕರಾಳ ಚಿತ್ರಣ

by Shwetha
October 9, 2026
0

ಮುಂಗಾರು ಮಳೆ ಕೈಕೊಟ್ಟ ಪರಿಣಾಮ ರಾಜ್ಯದ ಹಲವು ಭಾಗಗಳಲ್ಲಿ ಬರ ಪರಿಸ್ಥಿತಿ ಎದುರಾಗಿದ್ದು, ರೈತರ ಸಂಕಷ್ಟ ಮತ್ತಷ್ಟು ತೀವ್ರಗೊಂಡಿದೆ. ಬೆಳೆಗಳಿಗೆ ನೀರಿನ ಕೊರತೆ ಎದುರಾಗಿರುವ ಬೆನ್ನಲ್ಲೇ, ಜಾನುವಾರುಗಳ...

ಸುರೇಶ್ ಕುಮಾರ್ ಮೈಗೆ ಮೆತ್ತಿರುವ ಹೊಲಸು ತೊಳೆಯಲು ಈಜಿಪ್ಟ್ ಯಂತ್ರವೂ ಸಾಲದು:ಸಜ್ಜನ ಮುಖವಾಡದ ದುರ್ಜನ ಶಾಸಕ ಹರಿಪ್ರಸಾದ್ ಆಕ್ರೋಶ

ಮತ ಉಳಿಸಿ ದೇಶ ಉಳಿಸಿ: ಅಕ್ಟೋಬರ್ 10 ರಿಂದ ಬಿಜೆಪಿಯ ಮತಗಳ್ಳತನದ ವಿರುದ್ಧ ಕಾಂಗ್ರೆಸ್ ಮಹಾಯಾತ್ರೆ- ಮತ ರಕ್ಷಕರ ಮೂಲಕ ಪ್ರತಿ ಹಳ್ಳಿಗೂ ಕಾಂಗ್ರೆಸ್ ಲಗ್ಗೆ

by Shwetha
October 9, 2026
0

ಬೆಂಗಳೂರು: ಭಾರತೀಯ ಪ್ರಜಾಪ್ರಭುತ್ವದ ಅಡಿಪಾಯವಾಗಿರುವ ಮತದಾನದ ಹಕ್ಕನ್ನು ಉಳಿಸಲು ಕಾಂಗ್ರೆಸ್ ಈಗ ಬೃಹತ್ ಹೋರಾಟಕ್ಕೆ ಸಜ್ಜಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆ ಅಥವಾ ಎಸ್‌ಐಆರ್ ಪ್ರಕ್ರಿಯೆಯಲ್ಲಿ ನಡೆಯುತ್ತಿರುವ ಅಕ್ರಮಗಳನ್ನು...

ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ CJP ಪ್ರತಿಭಟನೆ: SIR ರದ್ದುಪಡಿಸುವಂತೆ ಒತ್ತಾಯ

ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ CJP ಪ್ರತಿಭಟನೆ: SIR ರದ್ದುಪಡಿಸುವಂತೆ ಒತ್ತಾಯ

by Shwetha
October 9, 2026
0

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್...

ಬೊಗಳುವ ಯತ್ನಾಳ್ ಗೆ ಕಚ್ಚುವ ತಾಕತ್ತಿಲ್ಲ: ನಿಮ್ಮ ಡಿಎನ್‌ಎ ಬಗ್ಗೆ ನಮಗೆ ಸಂಶಯವಿದೆ- ಕಾಂಗ್ರೆಸ್ ನಾಯಕರನ್ನ ಟೀಕಿಸುವ ಮುನ್ನ ನಿಮ್ಮ ಮೂಲ ನೋಡಿ ಎಂದ ಪ್ರದೀಪ್ ಈಶ್ವರ್

ಬೊಗಳುವ ಯತ್ನಾಳ್ ಗೆ ಕಚ್ಚುವ ತಾಕತ್ತಿಲ್ಲ: ನಿಮ್ಮ ಡಿಎನ್‌ಎ ಬಗ್ಗೆ ನಮಗೆ ಸಂಶಯವಿದೆ- ಕಾಂಗ್ರೆಸ್ ನಾಯಕರನ್ನ ಟೀಕಿಸುವ ಮುನ್ನ ನಿಮ್ಮ ಮೂಲ ನೋಡಿ ಎಂದ ಪ್ರದೀಪ್ ಈಶ್ವರ್

by Shwetha
October 9, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಹರಿತವಾದ ಮಾತುಗಳಿಗೆ ಹೆಸರಾದ ಇಬ್ಬರು ನಾಯಕರ ನಡುವೆ ಈಗ ಡಿಎನ್‌ಎ ಸಮರ ಶುರುವಾಗಿದೆ. ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕರನ್ನು ಸದಾ ಟೀಕಿಸುವ ಹಿರಿಯ ಶಾಸಕ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram