ದೇವನಹಳ್ಳಿ: ಗೋದಾಮಿಗೆ ಬೆಂಕಿ ಹೊತ್ತಿಕೊಂಡು ಅಪಾರ ಪ್ರಮಾಣದ ನಷ್ಟ ಉಂಟಾಗಿರುವ ಘಟನೆಯೊಂದು ನಡೆದಿದೆ.
ನಗರದ ಬ್ಯಾಟರಾಯನಪುರ ಹತ್ತಿರದ ಕಾರ್ ಶೋ ರೂಮ್ ಹಿಂಭಾಗದ ಗೋದಾಮಿನಲ್ಲಿ ಆಕಸ್ಮಿಕ ಬೆಂಕಿ (fire accident) ಕಾಣಿಕೊಂಡಿದೆ. ಪರಿಣಾಮ ಗೋಡೌನ್ ಸಂಪೂರ್ಣ ಹೊತ್ತಿ ಉರಿದೆ.
ಬೆಂಕಿಯ ಕೆನ್ನಾಲಿಗೆಗೆ ಕಾರ್ ಶೋ ರೂಂ ಮತ್ತು ಅಕ್ಕ ಪಕ್ಕದ ಮನೆ ಹಾಗೂ ಅಂಗಡಿ ಮಾಲೀಕರಿಗೆ ಆತಂಕ ಶುರುವಾಗಿತ್ತು. ಶೋ ರೂಂ ನಲ್ಲಿನ ಕಾರುಗಳನ್ನ ಸಿಬ್ಬಂದಿ ಹೊರ ತೆಗೆದಿದ್ದಾರೆ. ಸ್ಥಳಕ್ಕೆ 3 ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯ ಮಾಡಲಾಗಿದೆ. ಹೀಗಾಗಿ ಹೆಬ್ಬಾಳ ಬಳಿಯ ಏರ್ಪೋರ್ಟ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.








