ಇತ್ತೀಚೆಗಷ್ಟೇ ಅಮೆರಿಕದಲ್ಲಿ ವ್ಯಕ್ತಿಯೊಬ್ಬರಿಗೆ ಹಂದಿ ಹೃದಯ ಕಸಿ ಮಾಡಲಾಗಿತ್ತು. ಆದರೆ, ಅವರು 40 ದಿನಗಳ ನಂತರ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಸೆಪ್ಟೆಂಬರ್ನಲ್ಲಿ ಅಮೆರಿಕದ (America) ಮೇರಿಲ್ಯಾಂಡ್ ವಿವಿ ತಜ್ಞರು ಇಂತಹ ಸಾಹಸ ಮಾಡಿದ್ದರು. ಸಾವಿನಂಚಿನಲ್ಲಿದ್ದ 58 ವರ್ಷದ ವ್ಯಕ್ತಿಯನ್ನು ಉಳಿಸಿಕೊಳ್ಳಲು ಅಂತಿಮ ಪ್ರಯತ್ನವಾಗಿ ಹಂದಿ ಹೃದಯ ಕಸಿ ಮಾಡಲಾಗಿತ್ತು. ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿತ್ತು. ಆದರೆ, ಮನುಷ್ಯನ ದೇಹ ಮಾತ್ರ ಹೃದಯವನ್ನು ನಿರಾಕರಿಸುತ್ತಿತ್ತು. ಹೀಗಾಗಿ ಹೊಂದಿಕೊಳ್ಳುತ್ತಿರಲಿಲ್ಲ ಎಂದು ತಿಳಿದು ಬಂದಿದೆ.
ಲಾರೆನ್ಸ್ ಫೌಸೆಟ್ ವ್ಯಕ್ತಿಯು ಹಂದಿ ಹೃದಯದ ಕಸಿ ಮಾಡಿಸಿಕೊಂಡ ಎರಡನೇ ವ್ಯಕ್ತಿಯಾಗಿದ್ದರು. ಕಳೆದ ವರ್ಷ ಹೃದಯ ಕಸಿ ಮಾಡಿಸಿಕೊಂಡಿದ್ದ ವ್ಯಕ್ತಿ ಕೂಡ 2 ತಿಂಗಳಲ್ಲಿ ಸಾವನ್ನಪ್ಪಿದ್ದ. ಈಗ ಎರಡನೇ ವ್ಯಕ್ತಿ ಕೂಡ ಸಾವನ್ನಪ್ಪಿದ್ದಾರೆ.








