ನಟಿ ತ್ರಿಷಾ ಬಗ್ಗೆ ಕೀಳು ಮಟ್ಟದ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಸಹ ನಟನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಖಳನಟನ ಕೀಳು ಅಭಿರುಚಿಯ ಹೇಳಿಕೆ ಬಗ್ಗೆ ನಟಿ ತ್ರಿಷಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೆ ಆ ಖಳನಟನಿಗೆ ತಮ್ಮ ಇತ್ತೀಚೆಗಿನ ಸಿನಿಮಾದಲ್ಲಿ ಅವಕಾಶ ಕೊಟ್ಟಿದ್ದ ನಿರ್ದೇಶಕ ಸಹ ಖಳನಟನ ಹೇಳಿಕೆ ಖಂಡಿಸಿದ್ದಾರೆ. ವಿಜಯ್ ನಟನೆಯ ಇತ್ತಿಚೆಗಿನ ಸೂಪರ್ ಹಿಟ್ ಸಿನಿಮಾ ‘ಲಿಯೋ’ನಲ್ಲಿ ನಟಿಸಿದ್ದ ನಟ ಮನ್ಸೂರ್ ಅಲಿ ಖಾನ್ ಸಂದರ್ಶನವೊಂದರಲ್ಲಿ ‘ಲಿಯೋ’ ಸಿನಿಮಾ ಬಗ್ಗೆ ಮಾತನಾಡುತ್ತಾ, ನಟಿ ತ್ರಿಷಾ ಕುರಿತು ಕೀಳು ಅಭಿರುಚಿಯ ಹೇಳಿಕೆ ನೀಡಿದ್ದಾರೆ.
ಆ ಸಿನಿಮಾದ ನಾಯಕಿ ತ್ರಿಷಾ ಎಂದು ತಿಳಿದಾಗ ಸಂತೋಷವಾಯಿತು. ತ್ರಿಷಾ ನಡುವೆ ಒಳ್ಳೆಯ ಬೆಡ್ರೂಂ ಸೀನ್ಗಳಿರುತ್ತವೆ ಎಂದು ನಿರೀಕ್ಷಿಸಿದ್ದೆ. ಅದೆಲ್ಲ ಸುಳ್ಳಾಯಿತು. ತ್ರಿಷಾಳನ್ನು ಬೆಡ್ರೂಂಗೆ ಎತ್ತಿಕೊಂಡು ಹೋಗಿ ರೇಪ್ ಮಾಡುವ ಸೀನ್ ಇರುತ್ತದೆ ಅಂದುಕೊಂಡಿದ್ದೆ. ಆದರೆ, ‘ಲಿಯೋ’ ಸಿನಿಮಾದಲ್ಲಿ ತ್ರಿಷಾರ ಮುಖ ಸಹ ನನಗೆ ತೋರಿಸಲಿಲ್ಲ’ ಎಂದು ಹೇಳಿದ್ದಾರೆ. ಇದಕ್ಕೆ ನಟಿ ಸೇರಿದಂತೆ ಚಿತ್ರ ತಂಡ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.