ಹಿರಿಯ ರಾಜಕಾರಣಿ, ನಟ ದಿ. ಅಂಬರೀಶ್ ಅವರು ನಮ್ಮನ್ನೆಲ್ಲ ಅಗಲಿ 5 ವರ್ಷ ಕಳೆದಿವೆ. ಪುಣ್ಯ ಸ್ಮರಣೆಯ ಹಿನ್ನೆಲೆಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮಕ್ಕೆ ಸುಮಲತಾ ಅಂಬರೀಶ್ (Sumalatha), ಅಭಿಷೇಕ್ ಅಂಬರೀಶ್ (Abhishek), ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಹಲವಾರು ನಟ-ನಟಿಯರು ಹಾಗೂ ಅಭಿಮಾನಿಗಳು ಭಾಗವಹಿಸಿದ್ದಾರೆ.
ಈ ಸಂದರ್ಭದಲ್ಲಿ ಸಮಲತಾ ಅವರು ಭಾವುಕ ಪೋಸ್ಟ್ ಮಾಡಿದ್ದಾರೆ. ‘ಒಂದೇ ಜೀವನ ಅದೆಷ್ಟು ವ್ಯತ್ಯಾಸವಿದೆ. ಎಂದೆಂದಿಗೂ ನಮ್ಮ ನೆನಪುಗಳಲ್ಲಿ, ಸುಖ, ದುಃಖ, ನಗು, ಕಣ್ಣೀರು. ಪ್ರತಿಯೊಂದು ಕ್ಷಣವೂ ನೀವು ಬಿಟ್ಟ ನಿರ್ವಾತವನ್ನು ಅಳೆಯಲಾಗದು.ನಾನು ಆ ಪ್ರೀತಿಯನ್ನು ಕಾಪಿಟ್ಟುಕೊಳ್ಳುತ್ತೇನೆ, ನಷ್ಟವನ್ನಲ್ಲ. ಅನೇಕರನ್ನು ಒಳಗೊಂಡ ಜೀವನವನ್ನು ಎಂದಿಗೂ ಕಳೆದುಕೊಳ್ಳಲು ಆಗುವುದಿಲ್ಲ. ನೀವು ಶಾಶ್ವತವಾಗಿರುತ್ತೀರಿ.ನೀವೊಂದು ಜೀವ ಮೀರಿದ, ಒಂದು ಪ್ರಪಂಚ. ಇಂದು ನನಗೆ ಖಾತ್ರಿಯಿದೆ, ನೀವು ಅತ್ಯಂತ ಹೆಮ್ಮೆಯಿಂದ ಸಂಭ್ರಮದಲ್ಲಿರುವಿರಿ ಮತ್ತು ನಿಮ್ಮ ಆ ಪ್ರಪಂಚದಿಂದ ಅಭಿಷೇಕ್ ಅವರ ಚಲನಚಿತ್ರವನ್ನು ಆಶೀರ್ವದಿಸುತ್ತೀರಿ’ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.