ನವದೆಹಲಿ: ಮಿಜೋರಾಂನಲ್ಲಿ ಮೊದಲ ಹಂತದಲ್ಲಿ ಎಲ್ಲ 40 ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ಸದ್ಯ ಸಮೀಕ್ಷೆ ಹೊರ ಬಿದ್ದಿದ್ದು, ಪ್ರಾದೇಶಿಕ ಪಕ್ಷಗಳು ಮುಂದಿವೆ ಎನ್ನಲಾಗುತ್ತಿದೆ.
ನ. 7ರಂದು ನಡೆದ ಚುನಾವಣೆಯಲ್ಲಿ ಶೇ. 80.66ರಷ್ಟು ಮತದಾನವಾಗಿತ್ತು. ಬಿಜೆಪಿ ಬೆಂಬಲಿತ ಮಿಜೋ ನ್ಯಾಷನಲ್ ಫ್ರಂಟ್ (MNF) ಸದ್ಯ ಸರ್ಕಾರ ನಡೆಸುತ್ತಿದೆ. ಈ ಬಾರಿ ಕೂಡ ಎಂಎನ್ಎಫ್, ಕಾಂಗ್ರೆಸ್ ಹಾಗೂ ನೂತನ ಪಕ್ಷವಾಗಿರುವ ಜೋರಂ ಪೀಪಲ್ಸ್ ಮೂವ್ಮೆಂಟ್ (ZPM) ಪ್ರಯತ್ನಿಸುತ್ತಿವೆ.
ಆದರೆ, ಸಮೀಕ್ಷೆಯಂತೆ ಮತ್ತೆ ಈ ಬಾರಿಯೂ ಪ್ರಾದೇಶಿಕ ಪಕ್ಷಗಳೇ ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಆದರೆ, ಬಹುಮತ ಸಿಗುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗುತ್ತಿದೆ. ಈ ಬಾರಿ ನೂತನ ಪಕ್ಷವಾಗಿರುವ ಝಡ್ಪಿಎಂ ಜೊತೆ ಅಧಿಕಾರದಲ್ಲಿರುವ ಎಂಎನ್ಎಫ್ಗೆ ನೇರಾನೇರ ಇದೆ ಎನ್ನಲಾಗುತ್ತಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಎಂಎನ್ಎಫ್ 26, ಕಾಂಗ್ರೆಸ್ 5, ಬಿಜೆಪಿ 1 ಸ್ಥಾನದಲ್ಲಿ ಗೆಲುವು ಸಾಧಿಸಿದ್ದವು.
40 ಕ್ಷೇತ್ರಗಳಿದ್ದು, ಬಹುಮತಕ್ಕೆ 21 ಸ್ಥಾನಗಳ ಅಗತ್ಯವಿದೆ. ಸದ್ಯ ಇಂಡಿಯಾ ಟಿವಿ: ಎಂಎನ್ಎಫ್ 14-18, ಕಾಂಗ್ರೆಸ್ 08-10, ಬಿಜೆಪಿ 0-2, ಝಡ್ಪಿಎಂ 12-16, ಜನ್ಕಿ ಬಾತ್: ಎಂಎನ್ಎಫ್ 10-14, ಕಾಂಗ್ರೆಸ್ 05-09, ಬಿಜೆಪಿ 00-02, ಝಡ್ಪಿಎಂ 15-25, ಸಿ-ವೋಟರ್: ಎಂಎನ್ಎಫ್ 15-21, ಕಾಂಗ್ರೆಸ್ 02-08, ಬಿಜೆಪಿ 0-5, ಝಡ್ಪಿಎಂ 12-18, ಪೀಪಲ್ಸ್ ಪಲ್ಸ್: ಎಂಎನ್ಎಫ್ 16-20, ಕಾಂಗ್ರೆಸ್ 08-10, ಬಿಜೆಪಿ 0-2, ಝಡ್ಪಿಎಂ 12-17 ಗೆಲುವು ಸಾಧಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.