ಕಲಬುರಗಿ: ವಾಹನ ದುರಸ್ಥಿ ಮಾಡುವ ಸಂದರ್ಭದಲ್ಲಿ ಅಪಘಾತ ಸಂಭವಿಸಿದ ಪರಿಣಾಮ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯ ಸೇಂಡ ತಾಲೂಕಿನ ಇವಣಿ ಗ್ರಾಮದ ಹತ್ತಿರ ನಡೆದಿದೆ. ಕೆಟ್ಟು ನಿಂತಿದ್ದ ವಾಹವನ್ನು ದುರಸ್ಥಿ ಮಾಡುತ್ತಿದ್ದ ಸಂದರ್ಭದಲ್ಲಿ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿದ್ದಾರೆ. ಹೈದರಾಬಾದ್, ಬೀದರ್ ಮೂಲದ ಪ್ರಶಾಂತ್, ವಿಠ್ಠಲ್, ಮಂಗ್ಲಿ ಸಾವನ್ನಪ್ಪಿದ ದುರ್ದೈವಿಗಳು. ಇವರು ಸೇಡಂ ಮಾರ್ಗವಾಗಿ ಹೈದರಾಬಾದ್ ಗೆ ತೆರಳುತ್ತಿದ್ದ ಸಂದರ್ಭದಲ್ಲಿ ವಾಹನ ಕೆಟ್ಟಿದೆ. ಆಗ ದುರಸ್ತಿ ಮಾಡುವ ಸಂದರ್ಭದಲ್ಲಿ ಸಿಮೆಂಟ್ ಟ್ಯಾಂಕರ್ ಹರಿದಿದೆ. ಪರಿಣಾಮ ಮೂವರು ಸಾವನ್ನಪ್ಪಿದ್ದಾರೆ.