ಮಹಾರಾಷ್ಟ್ರ: ವೈದ್ಯ ಎಂದರೆ ದೇವರ ಸಮಾನಕ್ಕೆ ಪೂಜಿಸುತ್ತಾರೆ. ಏಕೆಂದರೆ ಮರು ಹುಟ್ಟು ನೀಡುವವ ಆತ. ಆದರೆ, ಇಲ್ಲಿ ವೈದ್ಯರೊಬ್ಬರು ಮದ್ಯ ಸೇವಿಸಿ ಬಂದು ಎಡವಟ್ಟು ಮಾಡಿಕೊಂಡಿದ್ದಾರೆ.
ಈ ವೈದ್ಯನನ್ನು ಎಮರ್ಜೆನ್ಸಿ ಕೇಸ್ ನೋಡಿಕೊಳ್ಳಲು ನಿಯೋಜಿಸಲಾಗಿತ್ತು. ಆತ ತನ್ನ ಕರ್ತವ್ಯವನ್ನೇ ಮರೆತು ಕಂಠಪೂರ್ತಿ ಕುಡಿದು, ರೋಗಿಯ ಕೊಠಡಿಗೆ ಪ್ರವೇಶಿಸಿದ್ದಾನೆ. ಈ ಘಟನೆ ಮಹಾರಾಷ್ಟ್ರದ ವಾಶಿಮ್ನ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ ಎನ್ನಲಾಗಿದೆ.
ಕಾರಂಜಾ ಉಪಜಿಲ್ಲಾ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಡಾ.ಮಹೇಶ್ ರಾಥೋಡ್ ಎಂಬ ವೈದ್ಯನೇ ಈ ರೀತಿ ಮಾಡಿದವ. ಕೂಡಲೇ ಅಲ್ಲಿನ ಸಿಬ್ಬಂದಿ ಹಾಸಿಗೆ ಮೇಲೆ ಮಲಗುವಂತೆ ಹೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಲ್ಲದೇ, ಸಿಬ್ಬಂದಿ ಮರಳಿ ಮನೆಗೆ ಹೋಗುವಂತೆ ಒತ್ತಾಯಿಸುತ್ತಿರುವುದು ಕೂಡ ಇದರಲ್ಲಿ ಕಂಡು ಬಂದಿದೆ. ನಂತರ ಆತ ಅಲ್ಲಿಯೇ ಮಲಗಿದ್ದಾನೆ.
ಈ ವಿಷಯ ತಿಳಿಯುತ್ತಿದ್ದಂತೆ ವೈದ್ಯ ರಾಥೋಡ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಆಸ್ಪತ್ರೆಯ ಪ್ರಭಾರಿ ವೈದ್ಯಕೀಯ ಅಧೀಕ್ಷಕ ಡಾ.ಮಹೇಶ ಲಹಾನೆ ಹೇಳಿದ್ದಾರೆ.








