ವಾಷಿಂಗ್ಟನ್: ಇರಾಕ್ ನೆಲೆಗಳ ಮೇಲೆ ಇರಾನ್ ನ ಕ್ಷಿಪಣಿ ದಾಳಿಯ ನಂತರ ಮೆದುಳಿನ ಗಾಯಗಳಿಗೆ ಒಳಗಾದ ಅಮೆರಿಕಾ ಯೋಧರ ಸಂಖ್ಯೆ 110 ಕ್ಕೆ ಏರಿಕೆಯಾಗಿದೆ.
ಇದುವರೆಗೆ 110 ಭದ್ರತಾ ಸಿಬ್ಬಂದಿಗೆ ಲಘು ಟಿಬಿಐ ರೋಗವಿರುವುದು ದೃಢಪಟ್ಟಿದೆ. ನಿನ್ನೆ 100ಮಂದಿ ಈ ರೋಗಕ್ಕೆ ಒಳಗಾಗಿದ್ದರು ಎಂದು ವರದಿಯಾಗಿದ್ದು, ಇಂದು ಒಬ್ಬ ಯೋಧ ಹೆಚ್ಚಾಗಿ ಸೇರ್ಪಡೆಯಾಗಿದ್ದಾರೆ. ಟಿಬಿಐ ರೋಗನಿರ್ಣಯ ಮಾಡಲಾಗಿರುವ ಯೋಧರ ಪೈಕಿ 77 ಮಂದಿ ಸದ್ಯ ಕರ್ತವ್ಯಕ್ಕೆ ಮರಳಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಫೆ 10 ರಂದು, ಪೆಂಟಗನ್ ಬಿಡುಗಡೆ ಮಾಡಿದ ಪ್ರಕಟಣೆಯಂತೆ ಟಿಬಿಐ ರೋಗನಿರ್ಣಯ ಮಾಡಿದ ಅಮೆರಿಕ ಯೋಧರ ಸಂಖ್ಯೆ 109ನಷ್ಟಿತ್ತು. ಇದು ಜನವರಿ ಅಂತ್ಯದ ವರದಿಗೆ ಹೋಲಿಸಿದರೆ 45 ರಷ್ಟು ಹೆಚ್ಚಾಗಿದೆ.
ರಾಜ್ಯಸಭೆ ಚುನಾವಣೆ ಘೋಷಣೆ… 10 ರಾಜ್ಯಗಳ 37 ಸದಸ್ಯರ ಅವಧಿ ಮುಕ್ತಾಯ
ಚುನಾವಣಾ ಆಯೋಗ ರಾಜ್ಯಸಭೆ ಚುನಾವಣೆಯ ದಿನಾಂಕವನ್ನು ಪ್ರಕಟಿಸಿದ್ದು, ಮಾರ್ಚ್ 16ರಂದು ಮತದಾನ ನಡೆಯಲಿದೆ. ಒಟ್ಟು 10 ರಾಜ್ಯಗಳ 37 ರಾಜ್ಯಸಭಾ ಸದಸ್ಯರ ಅವಧಿ ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ...








