ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿಯ ನ್ಯಾಷನಲ್ (National) ಸಂಸ್ಥೆಯ ಮೇಲೆ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ದಾಳಿ ನಡೆಸಿರುವ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಸುಲೈಮಾನ್ ಎಂಬುವರಿಗೆ ಸೇರಿರುವ ನ್ಯಾಷನಲ್ ಸಂಸ್ಥೆಯ ಗೋಲ್ಡ್ ಪ್ಯಾಲೇಸ್, ಸೂಪರ್ ಬಜಾರ್, ಇಂಡಿಯನ್ ಗ್ಯಾಸ್ ಗೋಡೌನ್ ಹಾಗೂ ಸುಲೈಮಾನ್ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. 10 ವಾಹನಗಳಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಅಂಗಡಿ ಹಾಗೂ ಕಚೇರಿಯ ಬಾಗಿಲು ತೆರೆಯದ ಕಾರಣ ಇಡಿ ಅಧಿಕಾರಿಗಳು ಹೊರಗಡೆ ಕಾಯುತ್ತಿದ್ದಾರೆ. ಸುಲೈಮಾನ್ ಪುತ್ರ ಕನ್ ಸ್ಟ್ರಕ್ಷನ್ ವ್ಯವಹಾರ ಮಾಡುತ್ತಿದ್ದು, ಶಿವಮೊಗ್ಗದ ವಿಮಾನ ನಿಲ್ದಾಣ (Shivamogga Airport) ಕಾಮಗಾರಿ ನಡೆಸಿದ್ದರು.








