ಟೆಹ್ರಾನ್: ಇರಾನ್‌ನಲ್ಲಿ ಬಾಂಬ್ ಸ್ಪೋಟಗೊಂಡ ಪ್ರಕರಣದಲ್ಲಿ 103 ಜನ ಸಾವನ್ನಪ್ಪಿದ್ದು, 141 ಜನ ಗಾಯಗೊಂಡಿರುವ ಘಟನೆ ನಡೆದಿದೆ.
ಇರಾನ್‌ನ ದಕ್ಷಿಣ ನಗರಿ ಕೆರ್ಮಾನ್‌ನಲ್ಲಿ ಕಮಾಂಡರ್ ಕಾಸ್ಸೇಮ್ ಸೋಲೈಮನಿ (Iranian general Qasem Soleimani) ಸ್ಮರಣಾರ್ಥ ಕಾರ್ಯಕ್ರಮ ನಡೆದಿತ್ತು. ಈ ಸಂದರ್ಭದಲ್ಲಿಯೇ ಈ ಘಟನೆ ನಡೆದಿದೆ. 2020ರಲ್ಲಿ ಅಮೆರಿಕಾದಿಂದ ಬಾಗ್ದಾದ್‌ದ ವಿಮಾನ ನಿಲ್ದಾಣದ ಮೇಲೆ ಡ್ರೋಣ್ ದಾಳಿ (US drone strike in Iraq) ನಡೆದಿತ್ತು. ಈ ಸಂದರ್ಭದಲ್ಲಿ ಕಮಾಂಡರ್ ಕಾಸ್ಸೇಮ್ ಸೋಲೈಮನಿ ಹತರಾಗಿದ್ದರು. ಹೀಗಾಗಿ ಸ್ಮರಣಾರ್ಥವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಪಾರ ಸಂಖ್ಯೆಯಲ್ಲಿ ಸ್ಥಳೀಯರು ಆಗಮಿಸಿದ್ದರು.
ಈ ಸಂದರ್ಭದಲ್ಲಿ ಮೊದಲು ಅನಿಲ ತುಂಬಿದ ಡಬ್ಬಿ ಎಸೆಯಲಾಗಿದೆ. ಅದು ಸಿಡಿಯುತ್ತಿದ್ದಂತೆ ಮತ್ತಷ್ಟು ಡಬ್ಬಗಳನ್ನು ನಿರಂತರವಾಗಿ ಎಸೆಯಲಾಗಿದೆ. ಆಗ ಭಯಾನಕ ಸ್ಫೋಟಗಳು ಸಂಭವಿಸಿವೆ ಎಂದು ವರದಿಯಾಗಿದೆ. ಘಟನೆಯಲ್ಲಿ ಮೊದಲು 20ಕ್ಕೂ ಅಧಿಕ ಜನ ಸಾವನ್ನಪ್ಪಿದ್ದರು. ಸಂಜೆ ವೇಳೆಗೆ ಸಾವಿನ ಸಂಖ್ಯೆ 103 ದಾಟಿತು. ಅಲ್ಲದೇ, 141ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ.








