ಲಂಡನ್: ಒಂಟಿ ಮಹಿಳೆಯ ಮುಂದೆ ಭಾರತೀಯ ಮೂಲದ ವ್ಯಕ್ತಿ ಹಸ್ತ ಮೈಥುನ ಮಾಡಿಕೊಂಡ ಘಟನೆ ನಡೆದಿದ್ದು, ಆತನಿಗೆ 9 ತಿಂಗಳು ಶಿಕ್ಷೆ ವಿಧಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಇಲ್ಲಿಯ ಅಂಡರ್ ಗ್ರೌಂಡ್ ರೈಲಿನಲ್ಲಿ (Underground Train) ಒಂಟಿ ಮಹಿಳೆ ಚಲಿಸುತ್ತಿದ್ದಾಗ ಹಸ್ತಮೈಥುನ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಆರೋಪದ ಮೇಲೆ 43 ವರ್ಷದ ಭಾರತೀಯ ಮೂಲದ ವ್ಯಕ್ತಿಗೆ ಯುಕೆಯಲ್ಲಿ ಶಿಕ್ಷೆ ವಿಧಿಸಲಾಗಿದೆ. ಉತ್ತರ ಲಂಡನ್ ನ ವೆಂಬ್ಲಿಯಲ್ಲಿ ನೆಲೆಸಿದ್ದ ಮುಖೇಶ್ ಷಾ (43) ಲಂಡನ್ ಇನ್ನರ್ ಕ್ರೌನ್ ಕೋರ್ಟ್‌ನಲ್ಲಿ ಅಸಭ್ಯವಾಗಿ ವರ್ತಿಸಿದ ಆರೋಪದಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿದೆ. ಅಲ್ಲದೇ, ಈ ವ್ಯಕ್ತಿ ಬರೋಬ್ಬರಿ 10 ವರ್ಷಗಳ ಕಾಲ ಲೈಂಗಿಕ ಅಪರಾಧಿಗಳ ನೋಂದಣಿಗೆ ಸಹಿ ಹಾಕುವಂತೆ ಕೋರ್ಟ್ (London Crown Court) ಆದೇಶ ನೀಡಿದೆ ಎಂದು ತಿಳಿದು ಬಂದಿದೆ.
ಭವಿಷ್ಯದಲ್ಲಿ ಆತನ ಕ್ರಿಯೆಗಳನ್ನು ಮುಂದಿವರಿಸದಂತೆ ತಡೆಯಲು ಬಿಡುಗಡೆಯ ನಂತರವೂ ನಿರ್ಬಂಧಗಳನ್ನ ವಿಧಿಸಿದೆ.








