ಬೆಂಗಳೂರು: ವ್ಯಕ್ತಿಯೊಬ್ಬಕುಡಿಯೋಕೆ ಎಣ್ಣೆ ಕೊಡಿಸಿಲ್ಲವೆಂಬ ಕಾರಣಕ್ಕೆ ಹಿರಿಯ ನಾಗರಿಕನ ಮೇಲೆ ಇಟ್ಟಿಗೆಯಿಂದ ಹಲ್ಲೆ ಮಾಡಿರುವ ಘಟನೆ ನಡೆದಿದೆ.
ನಗರದ ಗಿರಿನಗರದಲ್ಲಿ ಈ ಘಟನೆ ನಡೆದಿದೆ. ಸಿಂಗಾರ ವೇಲು ಹಲ್ಲೆಗೊಳಗಾದ ವ್ಯಕ್ತಿ ಎನ್ನಲಾಗಿದ್ದು, ಧರ್ಮ ಎಂಬ ವ್ಯಕ್ತಿ ಎಸಗಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಸಿಂಗಾರ ವೇಲು ಮೂಕಾಂಭಿಕನಗರದಲ್ಲಿ ತಮ್ಮ ಮನೆಯ ಹತ್ತಿರ ಕಬಾಬ್ ತಿನ್ನುತ್ತಿದ್ದರು. ಈ ಸಂದರ್ಭದಲ್ಲಿ ರೋಪಿ ಧರ್ಮ, ನೈಂಟಿ ಎಣ್ಣೆ ಕೊಡಿಸುವಂತೆ ಕೇಳಿದ್ದಾನೆ. ಕೊಡಿಸದಿದ್ದಾಗ ಕೋಪಗೊಂಡು ಸಿಂಗಾರ ವೇಲು ಅವರಿಗೆ ಕಾಲಿನಿಂದ ಒದ್ದು, ಇಟ್ಟಿಗೆಯಿಂದ ಮುಖಕ್ಕೆ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ.
ಘಟನೆಯಲ್ಲಿ ಸಿಂಗಾರ ವೇಲು ಅವರ ಮುಖಕ್ಕೆ ಗಾಯಗಳಾಗಿದ್ದು, ತುಟಿಗೆ ಪ್ಲಾಸ್ಟಿಕ್ ಸರ್ಜರಿ ಮಾಡಲಾಗಿದೆ. ಹಲ್ಲೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.








