ಮಂಗಳೂರು: ವ್ಯಕ್ತಿಯೊಬ್ಬ ಬೇರೊಬ್ಬಳೊಂದಿಗೆ ಮದುವೆಯಾಗುತ್ತಿದ್ದ ಸಂದರ್ಭದಲ್ಲಿ ಮಾಜಿ ಪ್ರೆಯಸಿ ಮದುವೆ ಮಂಟಪಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಆಗ ಆತನ ನಿಜ ಬಣ್ಣ ಹೊರ ಬಂದಿದ್ದು, ಸಿನಿಮಾ ರೀತಿಯಲ್ಲಿ ಹೈಡ್ರಾಮಾ ನಡೆದಿದೆ.
ಈ ಘಟನೆ ಜಿಲ್ಲೆಯ ಉಳ್ಳಾಲ ತಾಲೂಕಿನ ಬೀರಿ ಹತ್ತಿರ ನಡೆದಿದೆ. ಕೇರಳ ಮೂಲದ ಅಕ್ಷಯ್ ಎಂಬ ವ್ಯಕ್ತಿ ಮಂಗಳೂರು ಮೂಲದ ಯುವತಿಯೊಂದಿಗೆ ಮದುವೆಯಾಗುತ್ತಿದ್ದ. ಆದರೆ, ಮೈಸೂರು ಮೂಲದ ಮಾಜಿ ಪ್ರೇಯಸಿ ಪೊಲೀಸರೊಂದಿಗೆ ಕಲ್ಯಾಣ ಮಂಟಪಕ್ಕೆ ಎಂಟ್ರಿಕೊಟ್ಟಿದ್ದಾಳೆ.
ಕೊಝಿಕ್ಕೋಡ್ ಮೂಲದ ಅಕ್ಷಯ್ ಕಳೆದ ಕೆಲವು ದಿನಗಳಿಂದ ಮೈಸೂರಿನ ಯುವತಿಯನ್ನು ಶಾದಿ ಡಾಟ್ ಕಾಮ್ ಮೂಲಕ ಪರಿಚಯ ಮಾಡಿಕೊಂಡಿದ್ದ. ನಂತರ ವಿವಾಹವಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದ. ಆದರೆ, ಮದುವೆಯಾಗದೆ ಬೇರೊಬ್ಬಳೊಂದಿಗೆ ವಿವಾಹಕ್ಕೆ ಮುಂದಾಗಿದ್ದ. ಹೀಗಾಗಿ ಯುವತಿ ಆತನ ವಿರುದ್ಧ ದೂರು ದಾಖಲಿಸಿದ್ದಳು.
ಪ್ರಕರಣ ಸಂಬಂಧ ಅರೋಪಿ ಅಕ್ಷಯ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯವು ವಜಾಗೊಳಿಸಿತ್ತು. ಈ ಮಧ್ಯೆ ಆತನ ಮದುವೆ ನಿರ್ಧಾರವಾಗಿತ್ತು. ವಿಚಾರ ತಿಳಿದು ಉಳ್ಳಾಲ ಪೊಲೀಸರೊಂದಿಗೆ ಆಗಮಿಸಿ ಹಾಲ್ ಮುಂಭಾಗದಲ್ಲಿ ಹೈಡ್ರಾಮ ನಡೆಸಿದ್ದಾಳೆ.
ನಂತರ ಪೊಲೀಸರೇ ಯುವತಿಯನ್ನು ಕರೆದುಕೊಂಡು ಹೋದರು. ಮಂಗಳೂರು ಮೂಲದ ಯುವತಿಗೆ ಆತ ತಾಳಿ ಕಟ್ಟಿದ್ದಾನೆ.








